The news is by your side.

ಮಹಿಳೆಯರ ಮಾರಾಟ ತಡೆಯಲು ಸಂಘಟಿತ ಪ್ರಯತ್ನ ಅಗತ್ಯ

ಬಸವರಾಜ ವರವಟ್ಟಿ
ಯಲ್ಲಾಪೂರ: ಮಹಿಳೆಯರ ಮತ್ತು ಮಕ್ಕಳ ಮಾರಾಟದಂತಹ ಗಂಭೀರ ಸಮಸ್ಯೆಯನ್ನು ಪರಿಹರಸಲು ಸರಕಾರದ ಕಾರ್ಯಕ್ರಮಗಳ ಜೊತೆಗೆ ಸಮುದಾಯದ ಜನರ ಸಹಭಾಗಿತ್ವ ಅಗತ್ಯ,.

ಪ್ರಕರಣಗಳನ್ನು ಬೆಳೆಕಿಗೆ ತರಲು ಯಾವುದೇ ಆತಂಕಕ್ಕೆ ಒಳಗಾಗದೆ ಜನರು ಬಾಲ್ಯವಿವಾಹ ಹಾಗೂ ಸಾಗಾಣಿಕೆ ನಡೆದಾಗ ಸ್ವಯಂ ಪ್ರೇರಿತರಾಗಿ ದೂರು ನೀಡಿ ಕೈಜೋಡಿಸಬೇಕು ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜ ವರವಟ್ಟಿ ಅಭಿಪ್ರಾಯಪಟ್ಟರು.

ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದಲ್ಲಿ ಮೈ ಚಾಯ್ಸ್ ಫೌಂಡೇಶನ ಹೈದರಾಬಾದ ಅವರು ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮಲ್ಲಿರುವ ಬಡತನ, ಅಜ್ಞಾನದಿಂದಾಗಿ ಕೆಲ ಸಾಮಾಜಿಕ ಸಮಸ್ಯೆಗಳು ಇನ್ನೂ ನಮ್ಮ ಸಮಾಜವನ್ನು ಕಾಡುತ್ತಿವೆ. ಸರಕಾರ ಇಂತಹ ಸಮಸ್ಯೆಗಳಲ್ಲಿ ನೊಂದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಸ್ವಧಾರ, ಸಾಂತ್ವನ, ಮಹಿಳಾ ಸಹಾಯವಾಣಿ, ಮಕ್ಕಳ ಸಹಾಯವಾಣಿ ಮತ್ತೀತರ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.

ಕರೋನಾ ಸಂದರ್ಭದಲ್ಲಿ ಇಲಾಖೆಯಿಂದ ಮನೆ ಮನೆಗೆ ವಿತರಿಸಲಾಗುತ್ತಿರುವ ಧವಸದಾನ್ಯಗಳ ಬಗ್ಗೆ ಮಾಹಿತಿ ನೀಡಿ ಮಾತೃವಂದನ ಯೋಜನೆಯಡಿ ಗರ್ಭಿಣಿ ಮಹಿಳೆಯರು ಲಾಭ ಪಡೆದುಕೊಳ್ಳುವಂತೆ ಕರೆನೀಡಿದರು.

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಲ್ಲಾ ನಿರೂಪಣಾಧಿಕಾರಿ ನವೀನಕುಮಾರ, ಮಹಿಳಾ ಮತ್ತು ಮಕ್ಕಳ ಅಬಿವೃಧ್ಧಿ ಅಧಿಕಾರಿ ಮೂರ್ತಿ, ಸಂಸ್ಥೆಯ ಸಂಯೋಜಕ ಎಂ.ಎಸ್.ಚೌಗಲಾ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ತಾಲೂಕಿನಿಂದ 30 ಕ್ಕೂ ಹೆಚ್ಚು ಕರೆಗಳಿಗೆ ಉತ್ತರಿಸಿದರು

Shree Panjurlli Fine Dine ADD

- Advertisement -

Leave A Reply

Your email address will not be published.