The news is by your side.

ಹಲಗಾ ಗ್ರಾಮದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ

ಬೆಳಗಾವಿ: ಬೆಳಗಾವಿ ಸುವರ್ಣ ವಿಧಾನಸೌಧದ ಬಳಿಯ ಹಲಗಾ ಗ್ರಾಮದ ಭರತೇಶ ನರ್ಸಿಂಗ ಮಹಾವಿದ್ಯಾಲಯದಲ್ಲಿ ಕೋವಿಡ ಕೇರ ಸೆಂಟರ ಆರಂಭಿಸಲಾಗಿದ್ದು, ಪ್ರಾಥಮಿಕ ಸೋಂಕು ಹೊಂದಿರುವವರಿಗೆ ಚಿಕಿತ್ಸೆ ನೀಡಲಾಗುವುದೆಂದು ಡಾ. ರಮೇಶ ದೊಡ್ಡಣ್ಣವರ ತಿಳಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ಭರತೇಶ ಶೀಕ್ಷಣ ಸಂಸ್ಥೆ, ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಝೇಶನ ಜಿತೋ, ಭಾರತೀಯ ಜೈನ ಸಂಘಟನಾ ಹಾಗೂ ಶ್ರೀ ಆರ್ಥೋ ಆ್ಯಂಡ ಟ್ರಾಮಾ ಸೆಂಟರ್ ಇವುಗಳ ಸಂಯುಕ್ತಾಶ್ರಯದಲ್ಲಿ ಕೋವಿಡ ಉಪಚಾರ ಕೇಂದ್ರ ಸೆ.1 ರಿಂದ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದರು.

ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದ್ದು, ಜನರಲ್ಲಿ ಭಯದ ವಾತವಾರಣ ಮೂಡಿದೆ. ಕೆಲವರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬರದ ಕಾರಣ ಸೋಂಕಿನ ತೀವ್ರತೆ ಬಗ್ಗೆ ಮಾಹಿತಿ ಲಭ್ಯವಾಗುತ್ತಿಲ್ಲ. ಸೋಂಕು ಅಂತಿಮ ಹಂತಕ್ಕೆ ಬಂದ ನಂತರ ಆಸ್ಪತ್ರೆಗಳಿಗೆ ಪರದಾಡುತ್ತಿರುವುದು ಕಂಡು ಬರುತ್ತಿದೆ. ಹಾಗಾಗಿ ಸೊಂಕಿಗೆ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ನೀಡುವುದು ತುರ್ತು ಅಗತ್ಯವಾಗಿದೆ. ಸೋಂಕು ತಡೆಗಟ್ಟಬೇಕಾದರೆ ಪ್ರತಿಯೊಬ್ಬರು ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಪಟ್ಟ ಡಾ. ದೊಡ್ಡಣ್ಣವರ ಉಪಚಾರ ಕೇಂದ್ರದಲ್ಲಿ ರಿಯಾಯತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು.

ಶ್ರೀ ಆರ್ಥೋ ಆ್ಯಂಡ ಟ್ರಾಮಾ ಸೆಂಟರ್‌ನ ಡಾ.ದೇವೆಗೌಡ, ಸಾಮಾನ್ಯ ಜನರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬರುವುದಿಲ್ಲ. ಆದರೆ ಈ ಸೋಂಕು ಒಂದು ಬಾರಿ ಮನುಷ್ಯನ ದೇಹದ ಫುಪ್ಪಸಕ್ಕೆ ಅಂಟಿಕೊಂಡರೆ ಉಸಿರಾಟದ ತೊಂದರೆ ಉಂಟಾಗುತ್ತದೆ. ಅದಕ್ಕಾಗಿ ಸಣ್ಣ ಜ್ವರ, ಕೆಮ್ಮು, ನೆಗಡಿ ಬಂದ ತಕ್ಷಣ ಆಸ್ಪತ್ರೆಗೆ ತೆರಳಿ ಪ್ರಾಥಮಿಕ ಹಂತದ ತಪಾಸಣೆ ಮಾಡಿಕೊಳ್ಳಬಹುದು. ಇದರಿಂದ ಸೋಂಕಿತರ ಪ್ರಾಣ ಉಳಿಸಲು ಸಾಧ್ಯವಾಗುತ್ತದೆ.

ಪ್ರಾರಂಭಿಸುತ್ತಿರುವ ಉಪಚಾರ ಕೇಂದ್ರಕ್ಕೆ ಸರಕಾರದಿಂದ ಯಾವುದೇ ವಿಶೇಷ ಅನುದಾನ ಸಿಗುತ್ತಿಲ್ಲ. ಆದರೂ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಈ ಸಂಘಟನೆಗಳು ಉಪಚಾರ ಕೇಂದವನ್ನು ಪ್ರಾರಂಭಿಸುತ್ತಿವೆ. ಜನರು ಸೋಂಕು ತಗುಲಿದೆಯೆಂದು ಹೆದರದೇ ವಿಶ್ವಾಸದಿಂದ ಇದ್

ಪ್ರಾರಂಭಿಸುತ್ತಿರುವ ಉಪಚಾರ ಕೇಂದ್ರಕ್ಕೆ ಸರಕಾರದಿಂದ ಯಾವುದೇ ವಿಶೇಷ ಅನುದಾನ ಸಿಗುತ್ತಿಲ್ಲ. ಆದರೂ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಈ ಸಂಘಟನೆಗಳು ಉಪಚಾರ ಕೇಂದವನ್ನು ಪ್ರಾರಂಭಿಸುತ್ತಿವೆ. ಜನರು ಸೋಂಕು ತಗುಲಿದೆಯೆಂದು ಹೆದರದೇ ವಿಶ್ವಾಸದಿಂದ ಇದ್ದರೆ ಸೋಂಕಣ್ಣು ಗೆಲ್ಲಬಹುದು ಮತ್ತು ಸೋಂಕಿತರ ಪ್ರಾಣವನ್ನು ಉಳಿಸಬಹುದು.

ಹೆಚ್ಚಿನ ಮಾಹಿತಿಗಾಗಿ 9845283242, 7760251949 ಇಲ್ಲಿ ಸಂಪರ್ಕೀಸಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಭರತೇಶ ಶಿಕ್ಷಣ ಸಂಸ್ಥೆಯ ಖಜಾಂಚಿ ಶ್ರೀಪಾಲ ಖೇಮಲಾಪೂರೆ, ಜಂಟಿ ಕಾರ್ಯುದರ್ಶಿ ಬಿ.ಎಸ್‌.ಚೌಗುಲೆ ಕಲಮನಿ, ನಿರ್ದೇಶಕರಾದ ವಿನೋದ ದೊಡ್ಡಣ್ಣವರ, ಪ್ರಕಾಶ ಉಪಾಧ್ಯೆ, ರಾಜೇಂದ್ರ ರಾಮಗೊಂಡಾ, ಭೂಷಣ ಮಿರ್ಜಿ, ಜಿತೋ ಚೇರಮನ್ ಮನೋಜ ಸಂಚೇತಿ, ಕಾರ್ಯದರ್ಶಿ ವಿಕ್ರಮ ಜೈನ, ಭಾರತಿಯ ಜೈನ ಸಂಘಟನೆಯ ಕಾರ್ಯದರ್ಶಿ ಹೀರಾಚಂದ ಕಲಮನಿ ಇದ್ದರು

- Advertisement -

Leave A Reply

Your email address will not be published.