The news is by your side.

ದೆಹಲಿಯಲ್ಲಿ ಕರೋಶಿ ಯೋಧ ಸಾವು !

 

ಚಿಕ್ಕೋಡಿ: ಕರೋಶಿ ಗ್ರಾಮದ ಯೋಧನೊಬ್ಬ ದೆಹಲಿಯಲ್ಲಿ ಸಾವನ್ನಪಿರುವ ಘಟನೆ ನಡೆದಿದೆ.
ಮೃತ ಯೋಧನ ಹೆಸರು ಅನೀಲ ಶಿವಾಜಿ ಶಿಂಗಾಯಿ(23) ಎಂದು ಗುರುತಿಸಲಾಗಿದೆ.
ಮೃತಪಟ್ಟ ಯೋಧನ ಸಾವಿನ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಕಳೆದ 18 ತಿಂಗಳ ಹಿಂದಷ್ಟೇ ಸೈನ್ಯಕ್ಕೆ ಸೇರ್ಪಡೆಯಾಗಿದ್ದನು. ತರಬೇತಿ ಮುಗಿಸಿ ಮೊದಲ ಬಾರಿಗೆ ಮಾರ್ಚನಲ್ಲಿ ತನ್ನ ಸ್ವಗ್ರಾಮಕ್ಕೆ ಆಗಮಿಸಿದ್ದನು.
ಲಾಕ್ ಡೌನ್‍ನಲ್ಲಿ ಸಿಲುಕಿದ್ದ ಯೋಧ ಒಂದೂವರೆ ತಿಂಗಳ ಹಿಂದೆಯಷ್ಟೇ ಮತ್ತೇ ಕರ್ತವ್ಯಕ್ಕೆ ತೆರಳಿದ್ದನು. ಶುಕ್ರವಾರ ಸೇನಾಧಿಕಾರಿಗಳು ಅನೀಲ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

- Advertisement -

Leave A Reply

Your email address will not be published.