The news is by your side.

 ಮದ್ಯ ಸಾಗಾಟ: ಗೋವಾ-ಬೆಳಗಾವಿ ಗಡಿಯಲ್ಲಿ ಹೆಚ್ಚಿನ ನಿಗಾ

 

ಬೆಳಗಾವಿ:ಬೆಳಗಾವಿ ಜಿಲ್ಲೆಗೆ ಗೋಅಕ್ರಮವಾದಿಂದ ಅನಧಿಕೃತ ಮದ್ಯ ಸಾಗಿಸುವ ಕೆಲಸ ದಿನದಿಂದ ದಿನಕ್ಕೆ ಹೆಚ್ಚಾಗಿ ನಡೆಯುತ್ತಿದೆ. ಆದ್ದರಿಂದ ಬೆಳಗಾವಿ ಮತ್ತು ಗೋವಾ ಗಡಿಯಲ್ಲಿ ರಾತ್ರಿಯ ವೇಳೆ ಹೆಚ್ಚು ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಅಬಕಾರಿ ಸಚಿವ ಎಚ್. ನಾಗೇಶ ತಿಳಿಸಿದರು.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಗೆ ಶೇ.50 ಆದಾಯ ಕಡಿಮೆ ಆಗಿದ್ದು, ಒಟ್ಟಾರೆ 3 ಸಾವಿರ ಕೋಟಿ ಇಲಾಖೆಗೆ ನಷ್ಟವಾಗಿದೆ. ಬಾರ್ ಮತ್ತು ರೆಸ್ಟೊರೆಂಟ್ ತೆರೆದ ಬಳಿಕ ಅಬಕಾರಿ ಇಲಾಖೆಯ ಅದಾಯ ಹೆಚ್ಚಲಿದೆ ಅವರು ತಿಳಿಸಿದರು.
ಸುವರ್ಣ ವಿಧಾನಸೌಧದಲ್ಲಿ ಶನಿವಾರ (ಆ.29) ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮದವರ ಜತೆ ಅವರು ಮಾತನಾಡಿದರು.
ಸಧ್ಯಕ್ಕೆ ಬಾರ್ ಮತ್ತು ರೆಸ್ಟೊರೆಂಟ್ ತೆರೆಯುವ ಬಗ್ಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ಬಾರ್ ಮತ್ತು ರೆಸ್ಟೊರೆಂಟ್ ತೆರೆಯುವುದರಿಂದ ಸರ್ಕಾರಕ್ಕೆ ಆದಾಯ ಬರಬಹುದು ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ಬಾರ್ ಮತ್ತು ರೆಸ್ಟೊರೆಂಟ್ ತೆರೆಯಲು ಅನುಮತಿ ನೀಡಿಲ್ಲ ಎಂದರು.
ಕಳ್ಳ ಭಟ್ಟಿ ಮಾಡುವರಿಗೆ ಹೆಚ್ಚಿನ ದಂಡ ಹಾಗೂ ಕಠಿಣ ಶಿಕ್ಷೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ದಂಡ ಕಟ್ಟುವುದರಿಂದ ಕಳ್ಳ ಭಟ್ಟಿ ಮಾಡುವ ಪ್ರಮಾಣ ಕಡಿಮೆ ಆಗುತ್ತದೆ ಎಂದು ತಿಳಿಸಿದರು.
ಮುಂದಿನ ವರ್ಷ ಅಬಕಾರಿ ಇಲಾಖೆಯ ಎಲ್ಲಾ ವರ್ಗದ ಸಿಬ್ಬಂದಿಗೆ ಬಡ್ತಿ ನೀಡಲಾಗುವುದು. ಅಬಕಾರಿ ಇಲಾಖೆಯ ಸಿಬ್ಬಂದಿಗಳ ರಕ್ಷಣೆಗಾಗಿ ಪೊಲೀಸ್ ಇಲಾಖೆಯ ರೀತಿಯಲ್ಲಿ ಶಸ್ತ್ರಾಸ್ತ್ರ ನೀಡುವ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಎಮ್. ಆರ್. ಪಿ ಅಂಗಡಿಗಳಿಗೆ ಹೊಸದಾಗಿ ಲೈಸೆನ್ಸ್ ನೀಡುವುದಿಲ್ಲ. ಅದಕ್ಕೆ ಸರ್ಕಾರದಿಂದಲೂ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಅಬಕಾರಿ ಇಲಾಖೆಯಲ್ಲಿ ರಾಜ್ಯಮಟ್ಟದ ಸಹಾಯವಾಣಿ (1800425255) ಆರಂಭಿಸಲಾಗುವುದು ಎಂದು ಸಚಿವ ಎಚ್.ನಾಗೇಶ್ ತಿಳಿಸಿದರು.
ಈ ವೇಳೆ ರಾಜ್ಯ ಅಬಕಾರಿ ಇಲಾಖೆಯ ಆಯುಕ್ತ ಡಾ. ಲೋಕೇಶ್, ಜಂಟಿ ಆಯುಕ್ತ ಡಾ.ವೈ. ಮಂಜುನಾಥ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -

Leave A Reply

Your email address will not be published.