The news is by your side.

ಶಿಕ್ಷಕಿಗೆ ಸಚಿವ ಸುರೇಶ್ ಕುಮಾರ್ ಸನ್ಮಾನ

 

ಚಿಕ್ಕೋಡಿ: ಲಾಕ್ ಡೌನ್‍ದಲ್ಲಿ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ತಾಲೂಕಿನ ವಡಗೋಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಪದ್ಮಶ್ರೀ ರೂಗೆ ಅವರ ಉತ್ತಮ ಪ್ರಬಂಧ ಮಂಡನೆಗೆ ಶಿಕ್ಷಣ ಸಚಿವ ಸುರೇಶಕುಮಾರ ಅವರು ಬೆಂಗಳೂರಿನಲ್ಲಿ ಸನ್ಮಾನಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸರಕಾರಿ ಶಾಲೆಗಳು ಹಾಗೂ ಶಾಲಾ ಮಕ್ಕಳ ಗುಣಾತ್ಮಕ ಶಿಕ್ಷಣದ ಸಬಲೀಕರಣಕ್ಕಾಗಿ ಶಿಕ್ಷಕರು ಪಾಲಕರು ಹಾಗೂ ಶಿಕ್ಷಣ ಇಲಾಖೆ ಕೈಗೊಳ್ಳಬಹದಾದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 10 ಉತ್ಕøಷ್ಟಮಟ್ಟದ ಪ್ರಬಂಧಗಳನ್ನು ಆಯ್ಕೆ ಮಾಡಲಾಗಿದೆ ಇವರ ಪ್ರಬಂಧ ಸಹ ಆಯ್ಕೆಯಾಗಿರುವ ಹಿನ್ನಲೇಯಲ್ಲಿ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಗುರಿಕಾರ, ಅರುಣ ಶಹಾಪುರಕರ, ವಿ.ಎಂ.ನಾರಾಯಣಸ್ವಾಮಿ, ಚಂದ್ರಶೇಖರ ನುಗ್ಲಿ,ಶ್ರೀಮತಿ ಪದ್ಮಲತಾ ಇತರರು ಉಪಸ್ಥಿತರಿದ್ದರು.

- Advertisement -

Leave A Reply

Your email address will not be published.