The news is by your side.

ಶಾಸಕ ಅಭಯ ಪಾಟೀಲ ಕೊರೋನಾ ಸೋಂಕಿತ

ಬೆಳಗಾವಿ : ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ ಕೊರೋನಾ ಸೋಂಕಿಗೊಳಗಾಗಿದ್ದಾರೆ. ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನಲೆಯಲ್ಲಿ ವೈದ್ಯರ ಸಲಹೆಯನ್ನು ಮೇರೆಗೆ ಪರೀಕ್ಷೆಗೊಳಗಾಗಿದ್ದರು, ಅವರಲ್ಲಿ ಸೋಂಕು ದೃಢವಾಗಿದೆ.

ತಾವು ಸೋಂಕಿತರಾಗಿರುವ ಕುರಿತು ಸೆಲ್ಫಿ ವೀಡಿಯೋ ಮೂಲಕ ಬಹಿರಂಗ ಪಡಿಸಿರುವ ಅವರು ಹೋಮ್ ಕ್ವಾರಂಟೈನ್ ಗೊಳಗಾಗಿರುವದಾಗಿಯೂ ಇತ್ತೀಚಿನ ದಿನಗಳಲ್ಲಿ ತಮ್ಮ ಸಂಪರ್ಕಕ್ಕೆ ಬಂದವರೆಲ್ಲರೂ ವೈದ್ಯಕೀಯ ಪರೀಕ್ಷೆಕೊಳಗಾಗುವದು ಸೂಕ್ತವೆಂಬ ಸಲಹೆ ನೀಡಿದ್ದಾರೆ.

ಎಲ್ಲರೂ ಎಚ್ಚರಿಕೆಯಿಂದಿದ್ದು, ಸರಕಾರದ ನಿಯಮಗಳನ್ನು ಪಾಲಿಸುವ ಮೂಲಕ ಕೊರೋನಾ ಮುಕ್ತ ಭಾರತ ಮಾಡಲು ಎಲ್ಲರೂ ಸಹಕರಿಸಬೇಕು ಎಂದ್ದೂ ಕೋರಿದ್ದಾರೆ.

- Advertisement -

Leave A Reply

Your email address will not be published.