The news is by your side.

ಬರಲಿಲ್ಲ ಸ್ವಜಾತಿಯವರು ಸಮಾಧಿಗೆ, ಕೊರೋನಾದಿಂದ ಮೃತಪಟ್ಟ ಹಿಂದುವ್ಯಕ್ತಿಯ ಅಂತಿಮ ಸಂಸ್ಕಾರ ನಡಿಸಿದ ಮುಸ್ಲಿಮರು

ಬೆಳಗಾವಿ : ಅವರು 70 ವರುಷದವರು, ಕೊರೋನಾ ಸೋಂಕಿಗೊಳಗಾಗಿ ಜಿಲ್ಲಾಸ್ಪತ್ರೆಯಲ್ಲಿ ನಿನ್ನೆ ಶನಿವಾರ ಅಸುನೀಗಿದರು. ಹಿಂದುಗಳಾದ ಅವರ ಶವ ಸಂಸ್ಕಾರಕ್ಕೆ ಅವರ ಜಾತಿಯ ಯಾರೂ ಸೋಂಕಿಗೆ ಭಯಪಟ್ಟು ಬರಲಿಲ್ಲ, ಆದರೆ ಮುಸ್ಲಿಂ ಯುವಕರು ಹಿಂದು ಸಂಪ್ರದಾಯದಂತೆ ಅವರ ಅಂತಿಮ ವಿಧಿವಿಧಾನಗಳ ಮೂಲಕ ನೆರವೇರಿಸಿ ರಾಷ್ಟ್ರದ ಮೂಲಭೂತವಾದಿಗಳಿಗೆ ಜಾತ್ಯತೀತತೆಯ ಅವಶ್ಯಕತೆಯನ್ನು ಮಂದಟ್ಟು ಮಾಡಿಕೊಟ್ಟಿದಾರೆ.

ಸೋಂಕಿತರು ಶಹಪೂರಿನ ಸರಾಫ್ ಗಲ್ಲಿಯ ನಿವಾಸಿಯಾಗಿದ್ದರು. ಚಿಕಿತ್ಸೆ ಫಲಿಸದೆ ನಿನ್ನೆ ಶನಿವಾರ ಅಸುನೀಗಿದ್ದರು. ಸೋಂಕಿಗೊಳಗಾಗಿ ಅಸುನೀಗಿದ್ದರಿಂದ ಬಂಧುಗಳು, ನೆರೆಹೊರೆಯವರು, ಸ್ವಜಾತಿಯವರು ಅಂತ್ಯಕ್ರಿಯೆ ನೆರವೇರಿಸಲು ಬರಲೇಯಿಲ್ಲ.

ಆದರೆ ಕೊರೋನಾ ಸೋಂಕಿನಿಂದ ಅಸುನೀಗಿದವರ ಅಂತ್ರಕ್ರಿಯೆ ನಡೆಸಲೆಂದೇ ಸ್ಥಾಪಿಸಲಾಗಿರುವ ಬೆಳಗಾವಿಯ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ “ಫ್ಯೂನರಲ್ ಟೀಮ್” ಮೃತ ವ್ಯೆಕ್ತಿಯ ಶವವನ್ನು ಅಂಬ್ಯಲೆನ್ಸ್ ನಲ್ಲಿ ಸದಾಶಿವ ನಗರದ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಚಿತಾಗಾರದಲ್ಲಿ ಕಟ್ಟಿಗೆಗಳನ್ನು ಕೂಡಿಸಿದರು,ದೂರದಲ್ಲಿ ನಿಂತು ಅರ್ಚಕರು ಹೇಳಿದಂತೆ ಹಿಂದೂ ಧರ್ಮದ ವಿಧಿವಿಧಾನಗಳನ್ನು ನೆರವೇರಿಸಿದ ನಂತರ ಅಂತ್ಯಕ್ರಿಯೆ ಮಾಡಿದ್ದಾರೆ. ಎ ತಂಡದ ಸದಸ್ಯರೆಲ್ಲರೂ ಮುಸ್ಲಿಂ ಸಮುದಾಯದವರು.

ಸಂಸ್ಥೆಯ ಅದ್ಯಕ್ಷ ರಾಜು ಸೇಠ ಅವರು ಅಂತ್ಯಕ್ರಿಯೆ ಗಾಗಿಯೇ ಯುವಕರ ತಂಡವೊಂದನ್ನು ನಿಯೋಜಿಸಿದ್ದಾರೆ, ಈ ತಂಡ ಯಾವುದೇ ಧರ್ಮ ಜಾತಿ ಲೆಕ್ಕಿಸದೇ ಬೆಳಗಾವಿ ಜಿಲ್ಲೆಯ ಹಳ್ಳಿಗಳಿಗೂ ಹೋಗಿ ನೂರಾರು ಜನರ ಅಂತ್ಯಕ್ರಿಯೆ ಮಾಡಿದೆ.

ಉಸಿರಾಟದ ಸಮಸ್ಯೆಯಿಂದ ಬಳಲುವ ಸೋಂಕಿತ ಬಡವರಿಗೆ ಅನುಕೂಲವಾಗಲೆಂದೇ ಅಂಜುಮನ್ ಸಂಸ್ಥೆ 150 ಆಕ್ಸಿಝನ್ ಸಿಲಿಂಡರ್ ವ್ಯೆವಸ್ಥೆ ಮಾಡಿ ಉಚಿತವಾಗಿ ನೀಡುತ್ತಿದೆ.

- Advertisement -

Leave A Reply

Your email address will not be published.