The news is by your side.

ಯೋಧನ ಅಕೌಂಟ್ ನಿಂದ 4 ಲಕ್ಷ ಕದ್ದ ಸೈಬರ್ ಖದೀಮರು!

ಬೆಂಗಳೂರು ಇದೀಗ ಸೈಬರ್ ವಂಚಕರ ಮೆಗಾ ಹಬ್ ಆಗಿ ಬದಲಾಗಿದೆ. ಲಾಕ್ ಡೌನ್ ಸಮಯದಲ್ಲಂತು ಬೆಂಗಳೂರಿನಲ್ಲಿ ಸೈಬರ್ ಕ್ರೈಂ ಸಂಬಂಧ ದೂರುಗಳು ಅತೀ ಹೆಚ್ಚು ದಾಖಲಾಗಿದೆ. ಇದೀಗ ಭಾರತೀಯ ಸೇನೆಯ ಬ್ರಿಗೇಡಿಯರೊಬ್ಬರಿಗೆ ಸೈಬರ್ ಕ್ರೈಂ ಖದೀಮರು ಸುಮಾರು 4 ಲಕ್ಷ ಹಣ ವಂಚಿಸಿರುವ ಘಟನೆ ಬೆಂಗಳೂರಿನ್ಲಲಿ ನಡೆದಿದೆ. ಅದರಲ್ಲೂ ಬ್ಯಾಂಕ್, ಎಟಿಎಂ ಡಿಟೇಲ್ಸ್ ಇಷ್ಟರವರೆಗೆ ಎಲ್ಲೂ ಬ್ರಿಗೇಡಿಯರ್ ನೀಡದಿದ್ದರು ಅವರ ಬ್ಯಾಂಕಿನಿಂದ ಹಣವನ್ನು ಸೈಬರ್ ಖದೀಮರು ಕದ್ದಿದ್ದಾರೆ.

8 ಟ್ರಾನ್ಸಕ್ಷನ್, ಹಣ ಗುಳುಂ!

ಭಾರತೀಯ ಸೇನೆಯಲ್ಲಿ ಸೇವೆ ಮಾಡುತ್ತಿರುವ 52 ವರ್ಷದ ಬ್ರಿಗೇಡಿಯರ್ ಗೆ ವಿಶಿಷ್ಟ ಸೇವಾ ಮೆಡಲ್ ಕೂಡ ದೊರಕಿದೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಇವರ ಬ್ಯಾಂಕ್ ಅಕೌಂಟ್ ಗೆ ಖದೀಮರು ಕನ್ನ ಹಾಕಿದ್ದಾರೆ. ಸೇನೆಯ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ ಒಟ್ಟು ಎಂಟು ಬಾರಿ ನಡೆದ ಟ್ರಾನ್ಸಕ್ಷನ್ ನಲ್ಲಿ ಒಟ್ಟು 4 ಲಕ್ಷವನ್ನು ಸೈಬರ್ ಖದೀಮರು ಗುಳುಂ ಸ್ವಾಹಃ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಆ. 23 ರಂದು ಒಂದು ಮೆಸೇಜ್ ಬ್ರಿಗೇಡಿಯರ್ ಫೋನ್ ಗೆ ಬಂದಿದ್ದು 49,99 ಸಾವಿರ ಹಣವನ್ನ 8 ಬಾರಿ ತೆಗೆದಿರುವುದು (ಡಿಬಿಟ್) ಗೊತ್ತಾಗಿದೆ ಎಂದು ಅವರು ಆರೋಪಿಸಿದರು. ಸಿಂಡಿಕೇಟ್ ಬ್ಯಾಂಕ್ ನಿಂದ ಹಣ ಹೋಗಿರುವುದು ಅವರಿಗೆ ತಿಳಿದಿದೆ.

ಬ್ರಿಗೇಡಿಯರ್ ಎಲ್ಲಿಯೂ ಕೂಡ ಬ್ಯಾಂಕಿನ ಮಾಹಿತಿಯನ್ನ ಕೊಟ್ಟಿಲ್ಲ. ಆದರೆ ಸೈಬರ್ ಖದೀಮರು ಹೇಗೋ ಅವರ ಎಟಿಎಂ ಮಾಹಿತಿ ಪಡೆದುಕೊಂಡು ಹ್ಯಾಕ್ ಮಾಡಿರುವ ಅನುಮಾನವನ್ನ ಬ್ಯಾಂಕಿನವರು ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಎಂಟು ವರ್ಗಾವಣೆಗೂ ಎರಡು ದಿನ ಮೊದಲು ಅಂದರೆ ಆ. 21 ರಂದು ಬ್ರಿಗೇಡಿಯರ್ ಎಟಿಎಂನಿಂದ ಹಣ ಬಿಡಿಸಿಕೊಳ್ಳಲು ತೆರಳಿದ್ದರು. ಆದರೆ ಹತ್ತು ಸಾವಿರ ವಿತ್ ಡ್ರಾ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ ಹದಿನೈದು ಸಾವಿರ ಹಣ ವಿತ್ ಡ್ರಾವಲ್ ಆಯ್ಕೆ ಇದ್ದರು ಹಣ ವಿತ್ ಡ್ರಾ ಆಗರಲಿಲ್ಲ. ಆದರೆ ಇಪ್ಪತೈದು ಸಾವಿರ ಅಕೌಂಟ್ ನಿಂದ ತೆಗೆಯಲಾಗಿದೆ ಎಂದು ತಕ್ಷಣ ಎಟಿಎಂನಲ್ಲಿ ತೋರಿಸಿತ್ತಂತೆ. ಆದರೆ ಇದು ಸಾಮಾನ್ಯ ಸಮಸ್ಯೆ ಎಂದು ಅಂದುಕೊಂಡು ಮರುದಿನ ಕಸ್ಟಮರ್ ಕೇರ್ ಗೆ ಕರೆ ಮಾಡಿ ದೂರು ದಾಖಲಿಸಿದ್ದರು.

ವರ್ಗಾವಣೆಯ ಮೂಲ ಯುಪಿ!

ಇನ್ನು ಸುಮಾರು ನಾಲ್ಕು ಲಕ್ಷ ಕಳೆದುಕೊಂಡ ಬಳಿಕ ಬ್ರಿಗೇಡಿಯರ್ ಬ್ಯಾಂಕಿಗೆ ಹೋಗಿದ್ದಾರೆ. ಈ ರೀತಿ ಸಮಸ್ಯೆಯಾಗಿದೆ ಎಂದು ತಿಳಿಸಿದ್ದಾರೆ. ಮುಂದೆ ಮತ್ತೆ ಹಣ ನಷ್ಟವಾಗುವುದು ಬೇಡ ಎಂದು ಅಂದುಕೊಂಡು ಬ್ಯಾಂಕ್ ಅಕೌಂಟ್ ಹಾಗೂ ಎಟಿಎಂ ಕಾರ್ಡ್ ನ್ನು ಬ್ಲಾಕ್ ಮಾಡಿಸಿಕೊಂಡಿದ್ದಾರೆ. ಆದರೆ ಬ್ಯಾಂಕಿನ ಸಂಪೂರ್ಣ ಮಾಹಿತಿ ನೋಡಿದಾಗ ಶಾಕಿಂಗ್ ನ್ಯೂಸ್ ತಿಳಿದುಬಂದಿದೆ. ಬ್ರಿಗೇಡಿಯರ್ ಹಣವನ್ನ ಪೇಟಿಎಂ ವರ್ಗಾವಣೆ ಮಾಡಲಾಗಿದ್ದು, ಇದರ ಮೂಲ ಉತ್ತರ ಪ್ರದೇಶ ಎಂದು ಬ್ಯಾಂಕಿನ ಸಿಸ್ಟಂ ತೋರಿಸಿಕೊಟ್ಟಿದೆ.

ಸದ್ಯ ಈ ಸಂಬಂಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಇವರ ಪರಿಚಯಸ್ಥರೇ ಈ ರೀತಿ ಮಾಡಿರಬಹುದು? ಅಥವಾ ಸೈಬರ್ ಖದೀಮರು ಬೇರೆ ಏನಾದರು ಚಾಣಾಕ್ಷತನ ತೋರಿಸಿದ್ರಾ? ಎನ್ನುವುದು ತನಿಖೆ ಬಳಿಕ ಹೊರಬರಬೇಕಾಷ್ಟೆ.

- Advertisement -

Leave A Reply

Your email address will not be published.