The news is by your side.

ಕರೋಶಿ ಗ್ರಾಮದ ಯೋಧ ಅನೀಲ ಶಿವಾಜಿ ಶಿಂಗಾಯಿಗೆ ಗೌರವ ಪೂರ್ಣ ವಿದಾಯ

ಚಿಕ್ಕೋಡಿ:: ಕರೋಶಿ ಗ್ರಾಮದ ಯೋಧ ಅನೀಲ ಶಿವಾಜಿ ಶಿಂಗಾಯಿ(23) ಅವರ ಅಂತ್ಯಕ್ರಿಯೆ ಭಾನುವಾರ ರಾತ್ರಿ ಸ್ವಗ್ರಾಮವಾದ ಕರೋಶಿಯಲ್ಲಿ ಸಕಲ ಗೌರವಗಳಿಂದ ನಡೆಯಿತು.
ದೆಹಲಿಯಲ್ಲಿನ ರಾಜಪುತಾನ ರಿಫಾಯಿಲ ನಲ್ಲಿ ತರಬೇತಿ ಮುಗಿಸಿದ್ದರು. ನಂತರ ಕಳೆದ ಮಾರ್ಚನಲ್ಲಿ ಕರೋಶಿ ಗ್ರಾಮಕ್ಕೆ ಆಗಮಿಸಿದ್ದರು.
ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮತ್ತೇ ದೇಶ ಸೇವೆ ಮಾಡಲು ಹೊದಾಗ ಇವರು ಮೃತಪಟ್ಟಿದ್ದಾರೆ. ಯೋದನ ಸಾವಿನಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.ಯೋದನ ಸಾವಿನ ಬಗ್ಗೆ ನಿಖರವಾದ ಮಾಹಿತಿ ತಿಳಿದುಬಂದಿಲ್ಲ ಎಂದು ತಹಶೀಲ್ದಾರ ತಿಳಿಸಿದ್ದಾರೆ.
ಕಡು ಬಡತನದಲ್ಲೇ ಹುಟ್ಟಿ ಬೆಳೆದ ಅನೀಲ ಹುಟ್ಟೂರಿನಲ್ಲೆ ತನ್ನ ಪ್ರಾಥಮಿಕ ಶಿಕ್ಷಣ ಪಡೆದುಕೊಂಡು ದೇಶ ಸೇವೆಗೆ ಸೈನಿಕನಾಗಿ ಸೇರಿಕೊಂಡಿದ್ದರು. ತರಬೇತಿ ಮುಗಿಸಿಕೊಂಡು ಇದೀಗ ದೇಶ ಮಾಡಲು ಹೊದಾಗ ಇವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಇದೀಗ ಸಾರ್ವಜನಿಕ ವಲಯದಲ್ಲೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಯೋದನ ಕಳೆದುಕೊಂಡ ಕುಟಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ನೀರವ ಮೌನ ಆವರಿಸಿದೆ.
ಗ್ರಾಮದ ಜನರು ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಯೋದನಿಗೆ ಯುವಕರು ವಿಶೇಷ ನಮನ ಸಲ್ಲಿಸಿ ಮತ್ತೇ ಹುಟ್ಟಿ ಬಾ ಎಂದು ಹೇಳುತ್ತಿದ್ದ ದೃಶ್ಯ ಗ್ರಾಮದಲ್ಲಿ ಸಾಮಾನ್ಯವಾಗಿತ್ತು. ತಾಲೂಕಾಡಳಿತ ಪರವಾಗಿ ಕೆಲವು ಅಧಿಕಾರಿಗಳು ಮಾತ್ರ ಅಂತಿಮ ಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಒಟ್ಟಿನಲ್ಲಿ ಯೋಧನ ಸಾವಿನ ಬಗ್ಗೆ ಗ್ರಾಮದಲ್ಲಿ ನಾನಾ ತರಹದ ಚರ್ಚೆಗಳು ಮಾಡುತ್ತಿರುವದು ಕಂಡು ಬಂತು.ಒಟ್ಟಿನಲ್ಲಿ ಕಡು ಬಡತನದಲ್ಲಿ ಹುಟ್ಟಿ ಬೆಳೆದ ಯೋಧ ಮೃತಪಟ್ಟಿರುವ ದುಖ: ಇದೀಗ ಕರೋಶಿ ಗ್ರಾಮದಲ್ಲಿ ಆವರಿಸಿದೆ. ಹೆತ್ತವರ ಆಕ್ರಂಧನ ಮುಗಿಲುಮುಟ್ಟಿದೆ.
ಪಾರ್ಥಿವ ಶರೀರ ಮೆರವಣಿಗೆ: ಗ್ರಾಮದಲ್ಲಿ ಯೋದನ ಪಾರ್ಥಿವ ಶರೀರ ಮೆರವಣಿಗೆ ನಡೆಯಿತು. ಪಾರ್ಥಿವ ಶರೀರದ ಅಂತಿಮ ನಮನ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಜಿ.ಪಂ ಮಾಜಿ ಸದಸ್ಯ ಮಹೇಶ ಭಾತೆ, ಕೆ.ಆರ್.ಡಿ.ಸಿಎಲ್ ಮಾಜಿ ಉಪಾಧ್ಯಕ್ಷ ಮಹಾವೀರ ಮೋಹಿತೆ, ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಸಂಜಯ ಕಾಂಬಳೆ, ಮುಖಂಡರಾದ ರಾಜು ಕೋಟಗಿ, ಎಂ.ಎಚ್.ಪಟೇಲ್,ವಿಜಯ ಕೋಠಿವಾಲೆ ಇತರರು ಭಾಗವಹಿಸಿದ್ದರು.

/

Shree Panjurlli Fine Dine ADD

- Advertisement -

Leave A Reply

Your email address will not be published.