The news is by your side.

ಅತಿಥಿಗಳಾಗಿದ್ದೀರಿ, ಮಾಲೀಕರಾಗಲು ಯತ್ನಿಸಬೇಡಿ, ಮಹಾರಾಷ್ಟ್ರವಾದಿಗಳಿಗೆ ಕರವೇ ಹಿತನುಡಿ

ಬೆಳಗಾವಿ : ಪೀರಣವಾಡಿ ಕ್ರಾಸ್ ನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ, ಅಡ್ಡಿಪಡಿಸಿದ್ದ ಮಹಾರಾಷ್ಟ್ರವಾದಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಖಡಕ್ ಎಚ್ಚರಿಕೆ ನೀಡಿದ್ದು “ನೀವು ಈ ರಾಜ್ಯದ ಅತಿಥಿಗಳು, ಅತಿಥಿಗಳಂತೇ ಇರಿ, ಮಾಲೀಕರಾಗಲು ಪ್ರಯತ್ನಿಸಿದರೆ ಪರಸ್ಥಿತಿ ಸರಿಯಿರಲ್ಲ”, ಎಂದು ಹೇಳಿದೆ.

ಸಂಘಟನೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ಸುದ್ಧಿ  ಮಾಧ್ಯಮದ ಮೂಲಕ ರಾಜ್ಯದ ಮಹಾರಾಷ್ಟ್ರ ಪರ ಸಂಘಟನೆ – ಮಹಾರಾಷ್ಟ್ರ ಏಕೀಕರಣ ಸಮಿತಿ – ಹಾಗು ಇದಕ್ಕೆ ಬೆಂಬಲ ನೀಡುತ್ತಿರುವ ಮಹಾರಾಷ್ಟ್ರದ ಶಿವಸೇನೆಗೆ ರಾಜ್ಯದಲ್ಲಿರುವ ಮರಾಠಿಗರು ಇಲ್ಲಿ ಬದುಕು ಸಾಗಿಸಲು ಬಂದಿರುವ ವಲೆಸಿಗರು, ರಾಜ್ಯದ ಅತಿಥಿಗಳು, ಮಾಲೀಕರಲ್ಲಾ ಸೇವಕರು, ಬದುಕಲಿಕ್ಕೆ ಬಂದವರು, ಧಿಮಾಕು, ದೌಲತ್ತು, ಗುಂಡಾಗಿರಿ ಮಾಡಿದ್ರೆ ನಡೆಯೋದಿಲ್ಲ. ನಿಮ್ಮ ಸೊಕ್ಕನ್ನು ಅಡಿಗಿಸುವ ಶಕ್ತಿ ಕನ್ನಡಿಗರಿಗಿದೆ ಹೇಳಿದರು.

ದರ್ಬಾರ್ ಮಾಡೋದಿದ್ರೆ ನಿಮ್ಮ ಮಹಾರಾಷ್ಟ್ರದಲ್ಲಿ ಮಾಡಿಕೊಳ್ಳಿ  ಕರ್ನಾಟಕದ ನೆಲದಲ್ಲಿ ಇದು ನಡೆಯಲ್ಲ. ಕರ್ನಾಟಕಕ್ಕೂ,  ಶಿವಸೇನೆ ಎಂಇಎಸ್‌ಗೂ ಏನು ಸಂಬಂಧ, ಸರಕಾರ ಅವರಿಗೇಕೆ ಹೆದರಿ ಓಲೈಸಬೇಕು, ವೋಟಿಗಾಗಿ ಕನ್ನಡಿಗರನ್ನು ಅಲಕ್ಷಿಸುವದನ್ನು ಸಹಿಸಲು ಸಾಧ್ಯವಿಲ್ಲವೆಂದು ಅವರು ಸರಕಾರಕ್ಕೆ ಹೇಳಿದರು.

ರಾಯಣ್ಣನ ಮೂರ್ತಿ ಇರುವ ವೃತ್ತಕ್ಕೆ ರಾಯಣ್ಣ ವೃತ್ತ ಎಂದು ನಾಮಕರಣ ಮಾಡಬೇಕು. ಈ ಸಂಬಂಧ ಸಿಎಂ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುವದು,  ಸರ್ಕಾರ ಸೂಕ್ತ ನಿರ್ಧಾರಕ್ಕೆ ಬರದೇ ಹೋದ್ರೆ, ಪೀರನವಾಡಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದವರಿಗೆ ಮುಂದೆ ಏನು ಮಾಡಬೇಕೆಂದು ಗೊತ್ತಿದೆ ಎನ್ನುವ ಮೂಲಕ ಪರೋಕ್ಷವಾಗಿ ಮತ್ತೊಮ್ಮೆ ಹೋರಾಟ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಶಿವಾಜಿ ಪ್ರತಿಮೆ ಇದ್ದಲ್ಲಿ ಶಿವಾಜಿ ಸರ್ಕಲ್ ಆಗಲಿ, ರಾಯಣ್ಣ ಪ್ರತಿಮೆ ಇದ್ದಲ್ಲಿ ರಾಯಣ್ಣ ಸರ್ಕಲ್ ಆಗಲಿ. ಇದಲ್ಲದೇ ಸುವರ್ಣಸೌಧ ಎದುರು ಕಿತ್ತೂರು ರಾಣಿ ಚೆನ್ನಮ್ಮ, ರಾಯಣ್ಣನ ಪ್ರತಿಮೆ ಸ್ಥಾಪಿಸಬೇಕೆಂದು ಆಗ್ರಹಿಸಿದರು.

ಸ್ಥಳೀಯ ರಾಜಕಾರಣಿಗಳಿಂದಲೇ ರಾಜ್ಯವಿರೋದಿಗಳು ಬೆಳಗಾವಿಯಲ್ಲಿ ಬೇರ

- Advertisement -

Leave A Reply

Your email address will not be published.