The news is by your side.

ಮಂತ್ರಿ ಶಶಿಕಲಾ ಜೊಲ್ಲೆಗೆ ಕೊರೋನಾ ಸೋಂಕು

ಬೆಳಗಾವಿ : ನಿಪ್ಪಾಣಿ ಶಾಸಕಿಯೂ ಆಗಿರುವ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಕೊರೋನಾ ಸೋಂಕಿತರಾಗಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಈ ಸಂಗತಿ ಬಹಿರಂಗ ಪಡಿಸಿರುವ ಅವರು, ವೈದ್ಯರ ಸಲಹೆಯ ಮೇರೆಗೆ ಇಂದಿನಿಂದ 14 ದಿನ ಮನೆಯಲ್ಲೇ ಕ್ವಾರಂಟೈನ್ ಆಗಿರುವದಾಗಿಯೂ ತಿಳಿಸಿದ್ದಾರೆ.

ಅಲ್ಲದೆ ತಮ್ಮೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದವರು ಸೋಂಕು ಪರೀಕ್ಷೆ ಮಾಡಿಸಿಕೊಳಲು ಸಲಹೆ ನೀಡಿದ್ದು, ತಮ್ಮ ಆರೋಗ್ಯ ಸ್ಥಿರವಾಗಿರುವದಾಗಿಯೂ ಗುಣವಾಗಿ, ಕ್ವಾರಂಟೈನ್ ಅವಧಿ ಮುಗಿದ ನಂತರ ಸೇವೆಗೆ ಮರಳುವದಾಗಿಯೂ ಅವರು ತಿಳಿಸಿದ್ದಾರೆ

- Advertisement -

Leave A Reply

Your email address will not be published.