The news is by your side.

ಕೊರೊನಾ:ಮಂಗಳವಾರದ ಜಿಲ್ಲಾ ಲೆಕ್ಕ

ಬೆಳಗಾವಿ:: ಜಿಲ್ಲೆಯಲ್ಲಿ ಮಂಗಳವಾರ ಮಹಾಮಾರಿ ಕೊರೊನಾ ಮತ್ತೆ ಆರ್ಭಟಿಸಿದೆ. ಬರೊಬ್ಬರಿ 316 ಪಾಸಿಟಿವ್ ಕೇಸ್‍ಗಳು ದೃಢಪಟ್ಟಿವೆ. ಇದರಲ್ಲಿ ಬೆಳಗಾವಿ ನಗರ ಮತ್ತು ತಾಲೂಕಿನಲ್ಲಿ 68 ಮತ್ತು ಚಿಕ್ಕೋಡಿ ತಾಲೂಕಿನಲ್ಲಿ 58 ಮಂದಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಅದೇ ರೀತಿ ಸವದತ್ತಿ-52, ಬೈಲಹೊಂಗಲ-41, ಅಥಣಿ-32, ಗೋಕಾಕ್-22, ರಾಯಬಾಗ-18, ಹುಕ್ಕೇರಿ-13, ರಾಮದುರ್ಗ-6, ಖಾನಾಪುರ-4 ಕೊರೊನಾ ಸೋಂಕಿತರು ಕಂಡು ಬಂದಿದ್ದಾರೆ. ಇನ್ನು ಏಳು ಜನರು ಇಂದು ಕೊರೊನಾಗೆ ಬಲಿಯಾಗಿದ್ದಾರೆ. ಬೆಳಗಾವಿ ನಗರ ಮತ್ತು ತಾಲೂಕಿನ 70 ವರ್ಷದ ವೃದ್ಧ, 68 ವರ್ಷದ ವೃದ್ಧ, 86 ವರ್ಷದ ವೃದ್ಧ, 35 ವರ್ಷದ ವ್ಯಕ್ತಿ, 48 ವರ್ಷದ ವ್ಯಕ್ತಿ, ಚಿಕ್ಕೋಡಿ ತಾಲೂಕಿನ 60 ವರ್ಷದ ವೃದ್ಧ, 72 ವರ್ಷದ ವೃದ್ಧ ಸಾವನ್ನಪ್ಪಿದವರು ಎಂದು ಗುರುತಿಸಲಾಗಿದೆ

- Advertisement -

Leave A Reply

Your email address will not be published.