The news is by your side.

ಸರ್ವಿಸ್ ರಿವಾಲ್ವಾರ್ ಮಿಸ್ ಫೈರ್ ಆಗಿ ಐಪಿಎಸ್​ ಅಧಿಕಾರಿ ಆರ್​​​.ಪಿ ಶರ್ಮಾ ಅವರ ಕುತ್ತಿಗೆಗೆ ಗುಂಡು

ಬೆಂಗಳೂರು: ತಮ್ಮ ಸರ್ವಿಸ್ ರಿವಾಲ್ವಾರ್ ಸ್ವಚ್ಛಗೊಳಿಸುವಾಗ ಮಿಸ್ ಫೈರ್ ಆಗಿದ್ದು, ಹಿರಿಯ ಐಪಿಎಸ್​ ಅಧಿಕಾರಿ ಆರ್​​​.ಪಿ ಶರ್ಮಾ ಅವರ ಕುತ್ತಿಗೆಗೆ ಗುಂಡು ತಗುಲಿದ್ದು ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಸಂಜೆ ತಮ್ಮ ಕೊತ್ತನೂರು ನಿವಾಸದಲ್ಲಿದ್ದ ವೇಳೆ ಮಿಸ್ ಫೈರ್ ಆಗಿದ್ದು ಗೃಹ ಮಂಡಳಿಯ ಪೊಲೀಸ್ ಮಹಾನಿರ್ದೇಶಕರೂ ಆಗಿರುವ ಆರ್ ಪಿ ಶರ್ಮಾ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ.

ವೈದ್ಯರ ತಂಡ ಆರ್​​.ಪಿ ಶರ್ಮಾ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಈ ಮಧ್ಯೆಯೇ ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಅವರು, ಆರ್​​​.ಪಿ ಶರ್ಮಾ ಆಕಸ್ಮಿಕವಾಗಿ ಫೈರ್​​ ಮಾಡಿಕೊಂಡಿದ್ಧಾರೆ ಎಂದು ಮಾಹಿತಿ ನೀಡಿದ್ಧಾರೆ.

Shree Panjurlli Fine Dine ADD

- Advertisement -

Leave A Reply

Your email address will not be published.