The news is by your side.

ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ : ಸರ್ಕಾರದ ವಿರುದ್ಧ ಘೋಷಣೆ

 

ಬೆಳಗಾವಿ : ಎಐಟಿಯುಸಿ ಸಂಘಟನೆಯು ಇಂದು ಕಟ್ಟಡ ಕಾರ್ಮಿಕ ರ ಪರವಾಗಿ ಪ್ರತಿಭಟನೆ ನಡೆಸಿತು.
ಅದೇ ರೀತಿ ಹೊಸ ಮತ್ತು ನವೀಕರಣಕ್ಕಾಗಿ ಕಾರ್ಮಿಕರು ಸಲ್ಲಿಸುವ ಅರ್ಜಿಗಳನ್ನು ಕಾಲಮಿತಿ ಒಳಗೆ ಅನುಮೋದನೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಎಐಟಿಯುಸಿ ಜಿಲ್ಲಾ ಸಂಚಾಲಕ ರಾಜು ಗಾಣಗಿ ಎಲ್ಲಾ ಕಾರ್ಮಿಕರಿಗೂ 5 ಸಾವಿರ ಕೋವಿಡ್ ಪರಿಹಾರ ಹಣ ತಲುಪಿಸಬೇಕು.
ಕಾರ್ಮಿಕರಿಗೆ ಗೃಹ ಭಾಗ್ಯ ಯೋಜನೆಯಡಿ 5 ಲಕ್ಷ ಸಾಲವನ್ನು ನೀಡಬೇಕಿದೆ ಆದ್ರೆ ಇದಕ್ಕೆ ಸಾಕಷ್ಟು ಷರತ್ತುಗಳನ್ನು ಹಾಕಿದ್ದರಿಂದ ಕಾರ್ಮಿಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ ಈ ಸಂಬಂಧ ಸರ್ಕಾರ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹಲವು ಕಾರ್ಮಿಕರು ಭಾಗಿಯಾಗಿದ್ದರು.
ಎಲ್ಲಾ ಕಟ್ಟಡ ಕಾರ್ಮಿಕರಿಗೆ ಮತ್ತು ಹೊಸದಾಗಿ ನೋಂದಾಯಿಸಿದ ಕಾರ್ಮಿಕರಿಗೂ ಕೋವಿಡ್ ಸಹಾಯಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಶುಕ್ರವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘಟನೆ, ಎಐಟಿಯುಸಿ ಸಂಘಟನೆ ಪದಾಧಿಕಾರಿಗಳು ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಷ ವ್ಯಕ್ತಪಡಿಸಿದರು.

- Advertisement -

Leave A Reply

Your email address will not be published.