The news is by your side.

ಶಾಸಕ ಉಮೇಶ ಕತ್ತಿ ಅವರಿಂದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ

 

ಹುಕ್ಕೇರಿ : ಇಂದು ಹುಕ್ಕೇರಿ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಉಮೇಶ ಕತ್ತಿ ಮಾತನಾಡಿದರು.

ಹುಕ್ಕೇರಿ ತಾಲೂಕಿನಲ್ಲಿ ವಿವಿಧ ವಸತಿ ಯೋಜನೆಗಳಲ್ಲಿ ಮಂಜೂರಾದ ಮನೆಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸ ಬೇಕು ಎಂದು ಅಧಿಕಾರಿಗಳಿಗೆ ಶಾಸಕ ಉಮೇಶ ಕತ್ತಿ ಸೂಚಿಸಿದರು.
ಕಳೆದ ಮೂರು ವರ್ಷಗಳಲ್ಲಿ ವಸತಿ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿ ಕೊಂಡಿರುವ 4,700 ಮನೆಗಳ ನೋಂದಣಿ ಮಾಡಿಲ್ಲ. ಇದರಿಂದಾಗಿ ಹೊಸದಾಗಿ ವಸತಿ ಯೋಜನೆಗಳ ಮನೆ ಮಂಜೂರಿ ಕಾರ್ಯ ವಿಳಂಬವಾಗುತ್ತದೆ. ಕಾರಣ ಎಲ್ಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮನೆಗಳ ನೋಂದಣಿ ಕಾರ್ಯಗಳನ್ನು 10 ದಿನಗಳಲ್ಲಿ ಪೂರ್ಣ ಗೊಳಿಸಬೇಕು ಎಂದರು.

ಇದೆ ಸಂದರ್ಭದಲ್ಲಿ ರೇಷ್ಮೆ ಇಲಾಖೆ ವತಿಯಿಂದ ಯೋಜನೆಗಳ ಲಾಭ ಪಡೆದ ಫಲಾನುಭವಿಗಳಿಗೆ ಚೆಕ್ ವಿವರಿಸಿದರು.ವೇದಿಕೆ ಮೇಲೆ ತಹಸಿಲ್ದಾರ ಅಶೋಕ ಗುರಾಣಿ, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಿ ಕೆ ಲಾಳಿ, ಸಿ ಪಿ ಆಯ್ ಗುರುರಾಜ ಕಲ್ಯಾಣಶೇಟ್ಟಿ, ಆರ್ ಎ ಚಟ್ನಿ ಉಪಸ್ಥಿತರಿದ್ದರು.

ನಂತರ ವಿವಿಧ ಇಲಾಖೆ ಅಧಿಕಾರಿಗಳಿಂದ ಇಲಾಖಾವಾರು ಪ್ರಗತಿ ಪರಶೀಲನೆ ಮತ್ತು ಕೋವಿಡ್19 ಕುರಿತು ಜರುಗಿಸಿದ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ರೇಷ್ಮೆ ಇಲಾಖೆ ಅಧಿಕಾರಿ ಎಸ್ ಎಸ್ ಡಬ್ಬನವರ, ಆರೋಗ್ಯ ಅಧಿಕಾರಿ ಡಾ, ಉದಯ ಕುಡಚಿ, ಕೃಷಿ ಅಧಿಕಾರಿ ಮಹಾದೇವ ಪಟಗುಂದಿ, ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಶೇಖರ ಪಾಟೀಲ, ಜಿಲ್ಲಾ ಪಂಚಾಯತ ಅಭಿಯಂತರ ಎ ಬಿ ಪಟ್ಟಣಶೆಟ್ಟಿ, ಅಕ್ಷರ ದಾಸೋಹ ನಿರ್ದೆಶಕ ಶ್ರೀಶೈಲ್ ಹಿರೇಮಠ, ಹುಕ್ಕೇರಿ, ಸಂಕೇಶ್ವರ ಮುಖ್ಯಾಧಿಕಾರಿ ಮೋಹನ ಜಾಧವ, ಜಗದೀಶ ಈಟಿ ಮೊದಲಾದವರು ಉಪಸ್ಥಿತರಿದ್ದರು.

Shree Panjurlli Fine Dine ADD

- Advertisement -

Leave A Reply

Your email address will not be published.