The news is by your side.

ಅರವಿಂದ ಮಿಲ್ಸ ಅಧಿಕಾರಿಗಳೊಂದಿಗೆ ಶ್ರೀ ಮಂತ ಪಾಟೀಲ್ ಸಮಾಲೋಚನೆ

 

ಬೆಂಗಳೂರು : ಸಚಿವ ಶ್ರೀಮಂತ ಪಾಟೀಲ್ ಅವರು ಇಂದು ಉತ್ತರ ಕರ್ನಾಟಕ ದಲ್ಲಿ ಜವಳಿ ಉದ್ಯಮ ಅಭಿವೃದ್ಧಿ ಕುರಿತು ಅರವಿಂದ ಮಿಲ್ಸ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಈ ಬಗ್ಗೆ ಸಚಿವರು ನೀಡಿದ ಹೇಳಿಕೆಯ ಪೂರ್ಣ ಪಾಠ ಹೀಗಿದೆ.
“ಇಲ್ಲಿಯ ಮೈಸೂರು ರಸ್ತೆಯಲ್ಲಿರುವ ಟೆಕ್ಸ್ ಪೋರ್ಟ್ ಇಂಡಸ್ಟ್ರೀಸ್ ಮತ್ತು ಅರವಿಂದ್ ಮಿಲ್ಸ್ ಗೆ ಭೇಟಿ ನೀಡಿ, ಸಂಸ್ಥೆಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜವಳಿ ಉದ್ಯಮಕ್ಕೆ ಸಂಬಂಧಪಟ್ಟ ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು.

ಹಾಗೂ, ಖಾದಿ ಡೆನಿಮ್ ಗಳನ್ನು ಕೈಮಗ್ಗ ನೇಕಾರರಿಂದ ತಯಾರಿಸುವಂತೆ ಮಾಡಲು ಯಾವ ರೀತಿಯ ಕ್ರಮ ಕೈಗೊಳ್ಳಬೇಕು, ಜವಳಿ ಉದ್ಯಮವನ್ನು ಉತ್ತರ ಕರ್ನಾಟಕದಲ್ಲಿ ಸ್ಥಾಪಿಸುವಂತೆ ಮಾಡಲು ಯಾವೆಲ್ಲ ಸವಲತ್ತುಗಳ ಅವಶ್ಯಕತೆ ಇದೆ ಎಂಬುವುದರ ಕುರಿತು ಸುದೀರ್ಘವಾಗಿ ಚರ್ಚಿಸಿ, ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.

ಈ ಸಂದರ್ಭ ಜವಳಿ ಆಯುಕ್ತರಾದ ಶ್ರೀ ಉಪೇಂದ್ರ ಪ್ರತಾಪ್ ಸಿಂಗ್, ಅರಿವಿಂದ್ ಮಿಲ್ಸ್ ನ ಉತ್ಪಾದನಾ ಮುಖ್ಯಸ್ಥರಾದ ಶ್ರೀ ಪ್ರಕಾಶ್ ಪೊನ್ನಸ್ವಾಮಿ, ಪ್ರಧಾನ ಕಾರ್ಯನಿರ್ವಾಹ ಅಧಿಕಾರಿಗಳಾದ ಶ್ರೀ ರಾಜ್ ಕಪೂರ್, ಟೆಕ್ಸ್ ಪೋರ್ಟ್ ಇಂಡಸ್ಟ್ರೀಸ್ ನ ಕಾರ್ಯನಿರ್ವಾಹಕ ಮುಖ್ಯಸ್ಥರಾದ ಶ್ರೀ ಮನಿಷ್ ಪೋದ್ದಾರ್, ಹಿರಿಯ ಉಪಾಧ್ಯಕ್ಷರಾದ ಶ್ರೀ ದಿನೇಶ್ ಪೈ ಹಾಗೂ ಇತರೆ ಪ್ರಮುಖರು ಉಪಸ್ಥಿತರಿದ್ದರು.

- Advertisement -

Leave A Reply

Your email address will not be published.