ಮೂಡಲಗಿ: ರಸ್ತೆ ಮತ್ತು ನೀರು ರೈತನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದ್ದು ಅವುಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ರೈತರಿಗೆ ವಿನಂತಿಸಿದರು.
ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಶುಕ್ರವಾರ ಸೆ-4 ರಂದು ಕರ್ನಾಟಕ ನೀರಾವರಿ ನಿಗಮದ ಸಹಯೋಗದಲ್ಲಿ ನಡೆದ ಜಿ.ಎಲ್.ಬಿ.ಸಿ ಉಪ ಕಾಲುವೆ ನಂ-1 ಘಟಪ್ರಭಾ 4701 ಖಾತೆಯಿಂದ 2.03 ಕಿ.ಮೀ.ವರೆಗೆ ಕಾಲುವೆ ಪಕ್ಕದ ಸೇವಾ ರಸ್ತೆ ದುರಸ್ತಿ ಕಾಮಗಾರಿಗೆ ಭೂಮಿ ಪೂಜೆಯನ್ನು ಈರಣ್ಣ ಕಡಾಡಿ ಅವರು ನೆರೆವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಡಾಡಿ ಅವರು ರೂ.90 ಲಕ್ಷ. ರೂಪಾಯಿಗಳ ಅನುದಾನ ಬಿಡುಗಡೆಯಾಗಿದ್ದು, ರೈತರು ತಮ್ಮ ತೋಟಗಳಿಗೆ ತೆರಳಲು ಅನುಕೂಲವಾಗುಂತೆ ಈ ರಸ್ತೆಯನ್ನ ನಿರ್ಮಿಸಲಾಗುವುದು. ತೋಟದ ಅಕ್ಕಪಕ್ಕ ಇರುವ ಸಾರ್ವಜನಿಕರು ಸರಕಾರದ ಜಾಗವನ್ನು ಅತಿಕ್ರಮಣ ಮಾಡಿಕೊಳ್ಳದೇ ಮುಂದಿನ ಹೊಲಗಳಿಗೆ ತೆರಳಲು ಉಳಿದವರು ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿದರು.
ಪ್ರಗತಿಪರ ರೈತರಾದ ಕಲ್ಲಪ್ಪ ಕಡಾಡಿ, ಈರಪ್ಪ ಹೆಬ್ಬಾಳ, ಪರಗೌಡ ಪಾಟೀಲ, ಬಸಪ್ಪ ಯಾದಗೂಡ, ಸಿದ್ದಪ್ಪ ಮುಗಳಿ, ಭೀಮಶಿ ಗೊರೋಶಿ, ಭೀಮಶೆಪ್ಪ ಖಾನಾಪೂರ, ಗುರುನಾಥ ಮದಬಾಂವಿ, ಲಕ್ಷ್ಮಣ ಹೆಬ್ಬಾಳ, ಶಿವನಿಂಗ ಕುಂಬಾರ, ತುಕಾರಾಮ ಪಾಲ್ಕಿ, ಸಿದ್ದಪ್ಪ ಹೆಬ್ಬಾಳ ಶಂಕರ ಖಾನಗೌಡ್ರ ಗುತ್ತಿಗೆದಾರ ಈರಣ್ಣ ಮುನ್ನೊಳಿಮಠ, ಮಹಾಂತೇಶ ಬಿ.ಪಾಟೀಲ, ಸಹಾಯಕ ಅಭಿಯಂತರ ಸುಭಾಸ ಮಹಿಮಗೊಳ ಸೇರಿದಂತೆ ಪ್ರಗತಿಪರ ರೈತರು ಉಪಸ್ಥಿತರಿದ್ದರು.
