The news is by your side.

ಗೋಕಾಕದಲ್ಲಿ ಕರೋನಾ ಪೀಡಿತರಿಗಾಗಿ ಐಸಿಯು. ಈರಣ್ಣ ಕಡಾಡಿಯವರಿಂದ ಉದ್ಘಾಟನೆ

ಗೋಕಾಕ: ವೈದ್ಯಕೀಯ ವ್ಯವಸ್ಥೆ ಎಷ್ಟೊಂದು ಮುಂದುವರೆದರೂ ಕೂಡಾ ಕರೊನಾ ಮಹಾಮಾರಿ ಒಡ್ಡಿದಂತಹ ಸವಾಲುಗಳಿಗೆ ಜನ ಪರದಾಡುವಂತಾಗಿದೆ. ಆದರೂ ಈ ಸಂದರ್ಭದಲ್ಲಿ ವೈದ್ಯರು ತಮ್ಮ ಮಾನವಿಯ ಸೇವೆಯನ್ನು ಮುಂದುವರೆಸಿದ್ದಾರೆ ಅದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಬಣ್ಣಿಸಿದರು.

ಶುಕ್ರವಾರ ಸೆ-4 ಗೋಕಾಕ ನಗರ ಡಾ|| ಕಡಾಡಿಯವರಿಂದ ನೂತನವಾಗಿ ಪ್ರಾರಂಭಿಸಿದ ಆಧಾರ ತೀವ್ರ ನಿಗಾ ಘಟಕ (ಇಂಟೆನ್ಸಿವ್ ಕೇರ್ ಯುನಿಟ್) ವಿಶೇಷವಾಗಿ ಕರೋನಾ ಪೀಡಿತರಿಗೆ ಸೇವೆಯನ್ನು ಒದಗಿಸಲು ಸಿದ್ದವಾಗಿರುವ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಇದುವರಗೆ 13487 ಕರೋನಾ (ಕೋವಿಡ್-19) ಪ್ರಕರಣಗಳು ದಾಖಲಾಗಿದ್ದು, ಇಲ್ಲಿಯವರೆಗೆ 9541 ಜನ ಆರೋಗ್ಯವಾಗಿ ಹೊರಬಂದಿದ್ದಾರೆ. ಇನ್ನೂ 3746 ಜನ ಸಕ್ರಿಯ ಪ್ರಕರಣ ಜಿಲ್ಲೆಯಲ್ಲಿದ್ದೂ ಕರೋನಾ ಮಹಾಮಾರಿಗೆ ಇಲ್ಲಿಯವರೆಗೆ 197 ಜನ ಮರಣ ಹೊಂದಿದ್ದಾರೆ.

ಈ ಸಂದರ್ಭದಲ್ಲಿ ವೈದ್ಯರು ಈ ಸವಾಲನ್ನು ಎದುರಿಸಿ ಜನ ಸಾಮಾನ್ಯರಿಗೆ ಸೇವೆ ಕೊಡುವ ದೃಷ್ಟಿಯಿಂದ ಸಾಕಷ್ಟು ಧೈರ್ಯದಿಂದ ಮುನ್ನುಗುತ್ತಿದ್ದಾರೆ,ಅವರ ಕಾರ್ಯವನ್ನು ನಾವೆಲ್ಲರೂ ಶ್ಲಾಘಿಸಲೇಬೇಕಾಗಿದೆ. ಖಾಸಗಿ ಆಸ್ಪತ್ರೆ ವೈದ್ಯರು ಕೂಡಾ ಕರೋನಾ ಪೀಡಿತರಿಗೆ ಶುಶ್ರೂಷೆ ಒದಗಿಸುವ ಮೂಲಕ ತಮ್ಮ ಸೇವೆಯನ್ನು ಸಲ್ಲಿಸುತ್ತಿರುವುದು ನಾವು ಸ್ವಾಗತಿಸಬೇಕಾಗಿದೆ. ಇವತ್ತು ಗೋಕಾಕ ನಗರದಲ್ಲಿ ಕಡಾಡಿಯವರ ಆಧಾರ ಆರೋಗ್ಯ ಆಸ್ಪತ್ರೆ ಪ್ರಾರಂಭವಾಗಿರುವುದು ಈ ಭಾಗದ ಜನರಲ್ಲಿ ಹೊಸ ಆಶಾಕಿರಣ ಮೂಡಿದಂತಾಗಿದೆ.

ಈ ಸುಸಜ್ಜಿತವಾದ ಆಸ್ಪತ್ರೆಯಲ್ಲಿ ಕರೊನಾ ಪೀಡಿತ ಗರ್ಭಿಣಿ ಮಹಿಳೆಯರ ಹೆರಿಗೆ ವ್ಯವಸ್ಥೆ, ಕರೊನಾ ಪೀಡಿತ ಚಿಕ್ಕಮಕ್ಕಳ ಚಿಕಿತ್ಸೆ ಲಭ್ಯವಾಗುತ್ತಿದ್ದು, 2 ವೇಂಟಿಲೇಟರ್, 8 ಹೈಗ್ಲೋ ಮೆಶಿನ್, 25 ಆಕ್ಸಿಜೆನ್ ಸೌಲಭ್ಯ, ಹಾಗೂ 5 ವಿಶೇಷ ವಾರ್ಡಗಳ ಹೊಂದಿದೆ ಇದು ನಮ್ಮ ತಾಲೂಕಿಗೆ ಹೆಮ್ಮೆಯ ಸೇವೆ ಎಂದರು.

ಈ ಕಾರ್ಯಕ್ರಮದಲ್ಲಿ ಗೋಕಾಕ ಶೂನ್ಯ ಸಂಪಾದನಮಠ ಪೂಜ್ಯ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಅಶೋಕ ಪೂಜೇರಿ, ಡಾ|| ಮಹಾಂತೇಶ ಕಡಾಡಿ, ಡಾ|| ಸಚಿನ ಶಿರಗಾಂವ, ಡಾ||ಮಯೂರಿ ಕಡಾಡಿ, ಕಲ್ಲಪ್ಪ ಕಡಾಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

 

 

 

 

 

 

 

Source link

Shree Panjurlli Fine Dine ADD

- Advertisement -

Leave A Reply

Your email address will not be published.