The news is by your side.

ಬೇವಿನ ಮರದಲ್ಲಿ ಕುತೂಹಲ ಕೆರಳಿಸುವಂತಹ ಶ್ರೀ ಅವಧೂತ ಶುಕಮುನಿ ಸ್ವಾಮಿ ಅವತಾರ

ಇಳಕಲ್ : ಹೊಲದ ಬದುವಿನ ಮೇಲೆ ಇರುವ ಬೇವಿನ ಮರವೊಂದರಲ್ಲಿ ಕುತೂಹಲ ಕೆರಳಿಸುವಂತಹ ಶ್ರೀ ಅವಧೂತ ಶುಕಮುನಿ ಸ್ವಾಮಿ ಪಲ್ಲಕ್ಕಿಯ ಮುಖ (ಸಿಂಹದ ಮುಖದ) ರೂಪದಲ್ಲಿ ಮೂಡಿದೆ.ಇದನ್ನು ದೈವೀ ಸ್ವರೂಪದ್ದೆಂದು ನಂಬಿರುವ ಗ್ರಾಮಸ್ಥರು ಬೇವಿನ ಮರಕ್ಕೆ ಪೂಜೆ ಸಲ್ಲಿಸುವ ಮೂಲಕ ಭಕ್ತಿಸೇವೆ ಸಲ್ಲಿಸಲು ತೊಡಗಿದ್ದಾರೆ.

ಬೇವಿನ ಮರಗಳಲ್ಲಿ ನೈಸರ್ಗಿಕವಾಗಿ ಈ ರೀತಿ ಬದಲಾವಣೆಗಳು ನಡೆಯುವುದು ಸಹಜವಾಗಿಯೇ ಇದೆ, ಹಾಗೂ ಹಿಂದಿನಿAದಲೂ ಇಂತಹ ವಿಷಯಗಳು ಕೇಳಿಕೊಂಡು ಬರುತ್ತಿದರೂ ಕೂಡ ಗ್ರಾಮಸ್ಥರು ಇದನ್ನು ದೈವ ಸ್ವರೂಪ ಎಂದು ನಂಬಿದ್ದಾರೆ. ಕೆಲ ಪ್ರಜ್ಞಾವಂತ ಯುವಕರು ವೈಜ್ಞಾನಿಕ ದೃಷ್ಟಿಯಿಂದ ಕಾಣುವ ಜನ ಅದು ಪ್ರಕೃತಿ ಸಹಜ ಗುಣವೆಂದು ಹೇಳುತ್ತಾರೆ.ಗ್ರಾಮಸ್ಥರು ಅದನ್ನ ನಂಬದೆ ಅದನ್ನು ದೈವ ಸೃಷ್ಟಿ

ಇರಬೇಕು ಎಂದು ನಂಬಿ ಆ ಬೇವಿನ ಮರದಲ್ಲಿ ಮೂಡಿರುವ ಆಕೃತಿಗೆ ಹಾರ, ಉದುಬತ್ತಿ, ತೆಂಗಿನಕಾಯಿ ಅರ್ಪಿಸಿ ಪೂಜಿಸುವುದರಲ್ಲಿ ತೊಡಗಿದ್ದಾರೆ.

ದೋಟಿಹಾಳ ಕೇಸೂರ ಗ್ರಾಮದಿಂದ ಇಳಕಲ್ ಗೆ ತೆರಳುವ ಮಾರ್ಗದಲ್ಲಿ ಗ್ರಾಮದಿಂದ ಸುಮಾರು ೧ ಕೀಲೋ ಮೀಟರ ದೂರದಲ್ಲಿರುವ ಮಾಜಿ ಶಾಸಕ ಹಸನಸಾಬ ದೋಟಿಹಾಳ ಇವರ ತೋಟದ ಪಕ್ಕದಲ್ಲಿರುವ ನೀಲಮ್ಮ ಗಂಡ ಗುರುಪಾದಪ್ಪ ಗಡಾದ (ಕಡೆಕೊಪ್ಪ) ಇವರ ಕೇಸೂರ ಸಿಮಾದ ಸರ್ವೇ ನಂಬರ್ 43/*/7 ಇವರ ಹೊಲದಲ್ಲಿ ಇದು ಗೋಚರಿಸಿದೆ.

ದೋಟಿಹಾಳ ಕೇಸೂರ ಮಾರ್ಗವಾಗಿ ಸಂಚಾರ ಮಾಡುವ ಮುದೇನೂರ, ಬಿಜಕಲ್ಲ, ಹೆಸರೂರ, ಮಾಟೂರ, ಕ್ಯಾದಿಗುಪ್ಪಾ, ಜಾಲೀಹಾಳ, ಗೊತಗಿ, ಇನ್ನೂ ಮುಂತಾದ ಗ್ರಾಮಗಳಿಗೆ ತೆರಳುವ ಜನ ಸಹಜ ಕುತೂಹಲದಿಂದ ಕೆಳಗಿಳಿದು, ಹಾಗೂ ಗ್ರಾಮದಲ್ಲಿನ ಗ್ರಾಮಸ್ಥರು ಬೇವಿನ ಮರಕ್ಕೆ ಮೂಡಿರುವ ಆಕೃತಿಯನ್ನು ನೋಡಿ ಕೈಮುಗಿಯುತ್ತಿದ್ದಾರೆ.

ಮಂಗಳವಾರ ಸಾಯಂಕಾಲ ಇದು ಬೆಳಕಿಗೆ ಬಂದಿದ್ದು ಅವತ್ತಿಂದ ಇವತ್ತಿನವರೆಗೂ ಬೇವಿನ ಮರದಲ್ಲಿ ಶ್ರೀ ಶುಕಮುನಿ ಸ್ವಾಮಿಯ ಪಲ್ಲಕ್ಕಿ ಮುಖದ ಆಕಾರದಲ್ಲಿ ಮೂಡಿರುವ ಆಕೃತಿಯನ್ನು ನೋಡಲು ಗ್ರಾಮದ ಮಹಿಳೆಯರು, ಮಕ್ಕಳು, ಹಿರಿಯರು ಕಿರಿಯರು ಸಹ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಕೆಲವರು ಊದುಬತ್ತಿ, ಬಾಳೆಹಣ್ಣು, ತೆಂಗಿನಕಾಯಿ ಅರ್ಪಿಸಿ ತಮ್ಮ ಭಕ್ತಿಯನ್ನು ಮೆರೆಯುತ್ತಿದ್ದಾರೆ. ಇನ್ನೂ ಕೆಲವರಿಗೆ ಈ ಬೇವಿನ ಮರದಲ್ಲಿ ಮೂಡಿರುವ ಆಕೃತಿ ದೈವ ಸೃಷ್ಟಿಯೋ ಅಥವಾ ಮಾನವ ನಿರ್ಮಿತಿಯೋ ಎಂಬ ಆತಂಕ ಹಾಗೂ ಚಿಂತೆಯಲ್ಲಿದ್ದಾರೆ

- Advertisement -

Leave A Reply

Your email address will not be published.