The news is by your side.

ಪೌಷ್ಠಿಕಾಂಶ ಅಭಿಯಾನದ ಅಂಗವಾಗಿ ಕಿಶೋರಿಯರಿಗಾಗಿ ಆಹಾರ ತಯಾರಿಕೆ ಸ್ಫರ್ಧೆ ಕುಪೋಷಣೆಯಿಂದ ಕಿಶೋರಿಯರನ್ನು ಹೊರತರಬೇಕಾಗಿದೆ ಡಾ:ಕೀರ್ತಿ

ಬೆಳಗಾವಿ. ಬೆಳೆಯುವ ಕಿಶೋರಿಯರಲ್ಲಿ ಬಹುಸಂಖ್ಯಾತರು ಕುಪೋಷಣೆಗೆ ಒಳಗಾಗಿದ್ದಾರೆ, ಆಟ ಪಾಠದೊಂದಿಗೆ ಬೆಳೆಯಬೇಕಾದ ಮಕ್ಕಳು ಹಾಸಿಗೆ ಹಿಡಿಯುತ್ತಿದ್ದಾರೆ ಎಂದರೆ ಅದಕ್ಕೆ ಅವರಲ್ಲಿರುವ ಕುಪೋಷಣೆಯೆ ಕಾರಣ ಎಂದು ಮಹಿಳಾ ವೈಧ್ಯಾಧಿಕಾರಿ ಡಾ ಕೀರ್ತಿ ಅಭಿಪ್ರಾಯಪಟ್ಟರು.

ಸೇವಿಸಬೇಕಾದ ಆಹಾರ, ಅವುಗಳಲ್ಲಿರುವ ಸತ್ವದ ಕುರಿತು ಗ್ರಾಮೀಣ ಮಕ್ಕಳಲ್ಲಿ ಮತ್ತು ತಾಯಂದಿರಲ್ಲಿ ಅರಿವಿನ ಕೊರತೆ ಇದೆ. ಅದಕ್ಕಾಗಿ ರಕ್ತಹೀನತೆಯಿಂದ ಅನೇಕ ಸಮಸ್ಯೆಗಲಾಗುತ್ತಿದ್ದು ಮುಖ್ಯವಾಗಿ ಕಿಶೋರಿಯರನ್ನು ಕುಪೋಷಣೆಯಿಂದ ಹೊರತಂದು ಸದೃಢ ಕುಟುಂದ ಮತ್ತು ಸದೃಢ ರಾಷ್ಟ್ರನಿರ್ಮಿಸಬೇಕಾದ ಅಗತ್ಯತೆ ಇದೆ ಎಂದರು.

ಮಹಿಳಾ ಕಲ್ಯಾಣ ಸಂಸ್ಥೆ ಹುಕ್ಕೇರಿ ತಾಲೂಕಿನ ಯರಗಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಯರಗಟ್ಟಿ, ಯರನಾಳ, ಹೊಸುರ, ನಿರ್ವಾಣಹಟ್ಟಿ, ಬಡಕುಂದ್ರಿ ಗ್ರಾಮದ ಕಿಶೋರಿಯರಿಗಾಗಿ ಪೌಷ್ಠಕಾಂಶ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಹಾಗೂ ಪೌಷ್ಠಕಾಂಶ ತಯಾರಿಕೆ ಸ್ಫರ್ಧೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ಜಿ.ಎ.ಕರಗುಪ್ಪಿ ಮಾತನಾಡಿ ವೈವಿಧ್ಯಮಯ ಹಣ್ಣು ಹಂಪಲ, ಹಸಿ ತರಕಾರಿ, ಕಾಳುಗಳು,ಹಾಲು, ಮುಂತಾದವುಗಳು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಲಭ್ಯವಿದ್ದರೂ ಅವುಗಳನ್ನು ಹೇಗೆ ಆಹಾರದಲ್ಲಿ ಬಳಸಬೇಕು ಅನ್ನುವ ಅಜಾಗೃತಿಯಿಂದಾಗಿ ಮಕ್ಕಳು ಖಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದರು. ಉತ್ತಮ ಆರೋಗ್ಯಭ್ಯಾಸಗಳನ್ನು ವಿದ್ಯಾರ್ಥಿಗಳು ರೂಢಿಸಿ ಕೊಳ್ಳಬೇಕು ಹೆಚ್ಚಿನ ಅಂಕಗಳಿಸಲು ವ್ಯಾಯಮ ಪೌಷ್ಠಕಯುತ ಆಹಾರ, ಮನರಂಜನೆ, ಆಟ, ಸತತ ಅಧ್ಯಯನ ಸಹಕಾರಿಯಾಗಲಿದೆ ಎಂದರು.

ಭಾರತೀಯ ಕುಟುಂಬ ಯೋಜನಾ ಸಂಘದ ಶ್ರೀಮತಿ ಶ್ರಿದೇವಿ, ಸಲಹಾಗಾರರಾದ ಶ್ರೀಮತಿ ಲಕ್ಷ್ಮೀ,ಶ್ರೀಮತಿ ಶಾರದಾ, ಆರೋಗ್ಯ ಸಹಾಯಕಿ ಶ್ರೀಮತಿ ಪ್ರೀಯಾಂಕಾ ಉಂಡಿ , ಶ್ರೀಮತಿ ಶಾಹೀನ ಹೋಂಬಳ ಮುಂತಾದವರು ಉಪಸ್ಥಿತರಿದ್ದರು. 60 ಕ್ಕೂ ಹೆಚ್ಚು ಕಿಶೋರಿಯರ ಆರೋಗ್ಯ ಮತ್ತು ರಕ್ತ ತಪಾಸಣೆ ನಡೆಸಲಾಯಿತು.

- Advertisement -

Leave A Reply

Your email address will not be published.