The news is by your side.

ನನ್ನ ಮುಟ್ಟಿದ್ರೆ ಸರ್ಕಾರನೇ ಶೇಕ್ ಆಗೋಗುತ್ತೆ ಹುಷಾರ್.. ಪೊಲೀಸರಿಗೇ ಸಂಜನಾ…

ಸ್ಯಾಂಡಲ್ ವುಡ್ ನ ಡ್ರ ಗ್ ಮಾ ಫಿ ಯಾ ಪ್ರಕರಣದಲ್ಲಿ ಇಂದು ಬೆಳಿಗ್ಗೆ ಅನಿರೀಕ್ಷಿತ ಎನ್ನುವಂತೆ ನಟಿ ಸಂಜನಾ ಗಲ್ರಾನಿ ಅವರನ್ನು ಸಿಸಿಬಿ ಪೋಲಿಸರು ತಮ್ಮ ವಶಕ್ಕೆ ಪಡೆದು, ಅವರನ್ನು ಸಿಸಿಬಿ ಕಛೇರಿಯಲ್ಲಿ ವಿಚಾರಣೆ ಕೂಡಾ ನಡೆಸುತ್ತಾ ಇದ್ದಾರೆ. ನಟಿ ರಾಗಿಣಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂ ಧನಕ್ಕೆ ಒಳಪಡಿಸಿದಾಗ ಆಗದ ಸದ್ದು ಈಗ ನಟಿ ಸಂಜನಾ ವಿಷಯದಲ್ಲಿ ಆಗುತ್ತಿದ್ದು ನಿನ್ನೆಯವರೆಗೆ ಅತ್ತು ಕರೆದು ಗೋಗರೆದಿದ್ದ ನಟಿ ಸಂಜನಾ ಇಂದು ಏಕಾ ಏಕೀ ತನ್ನನ್ನು ವಿಚಾರಣೆಗೆ ಕರೆದಾಗಿನಿಂದ ಗ ರಂ ಆದಂತೆ ವರ್ತನೆ ತೋರಿದ್ದಾರೆ. ವಿಚಾರಣೆಗೆ ಹೋಗುವ ವೇಳೆ ಕೂಡಾ ತನಗೆ ತನ್ನ ಫೋನ್ ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ.

ಇದೆಲ್ಲದರ ನಡುವೆ ಮೊನ್ನೆ ಡ್ರ ಗ್ ಪೆ ಡ್ಲ ರ್ ರಾಹುಲ್ ನ ಮಹಜರಿಗೆ ಪೋ ಲಿಸರು ಹೋದಂತಹ ಸಂದರ್ಭದಲ್ಲಿ ಕೂಡಾ ಸಂಜನಾ ಪೋಲಿಸರ ಮೇಲೆ ಆ ವಾ ಜ್ ಹಾಕಿದ್ದಾರೆ ಎನ್ನಲಾಗಿದೆ‌. ನನ್ನ ಮುಟ್ಟಿದರೆ ಚೆನ್ನಾಗಿರೋಲ್ಲ, ಸರ್ಕಾರಾನೇ ಶೇಕ್ ಆಗುತ್ತೆ ಎನ್ನುವ ಹಾಗೆ ಆಕೆ ಪೋ ಲಿಸರಿಗೆ ಬೆ ದ ರಿಕೆಯನ್ನು ಹಾಕಿದ್ದರು ಎನ್ನಲಾಗಿದೆ‌. ನಾನ್ಯಾರು ಅಂತ ನಿಮಗಿನ್ನೂ ಗೊತ್ತಿಲ್ಲ, ಯಾರು ಯಾರೋ ಹೇಳಿದ್ದನ್ನು ಕೇಳಿ ನನ್ನ ವಿಚಾರಣೆಗೆ ಬರಬೇಡಿ ಎಂದು ಕೂಡಾ ಸಂಜನಾ ಪೋಲಿಸರಿಗೆ ಧ ಮ ಕಿ ಹಾಕುವ ಮಟ್ಟಕ್ಕೆ ಮಾತನಾಡಿದ್ದರು ಎನ್ನಲಾಗಿದೆ‌.

ಇದಾದ ಬೆನ್ನಲ್ಲೇ ಇಂದು ಆಕೆಯ ಯಾವುದೇ ಮಾತಿಗೂ ಕೂಡಾ ಡೋಂ ಟ್ ಕೇರ್ ಎಂದಿರುವ ಸಿಸಿಬಿ ಪೋ ಲಿ ಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಮುಂದಾಗಿದ್ದು ಆಕೆ ತನ್ನ ಮೊಬೈಲ್ ಬೇಕು ತಾನು ಯಾರಿಗೋ ಕರೆ ಮಾಡಬೇಕು ಎಂದೆಲ್ಲಾ ಹೇಳಿದ್ದಾರೆ ಎನ್ನಲಾಗಿದೆ‌. ಒಟ್ಟಾರೆ ಈ ಪ್ರಕರಣದಲ್ಲಿ ರಾಜಕೀಯದವರ ಹೆಸರುಗಳು ಕೇಳಿ ಬರುವಾಗಲೇ ಸಂಜನಾ ಹೇಳಿರುವ ಮಾತುಗಳನ್ನು ಕೇಳಿದಾಗ ಆಕೆಗೆ ಈ ಮಟ್ಟದ ಧೈರ್ಯ ಇದೆ ಎಂದರೆ ಆಕೆಯ ಹಿಂದೆ ಪ್ರಭಾವೀ ವ್ಯಕ್ತಿಗಳು ಇರಬಹುದಾ? ಅದೇ ಧೈರ್ಯದಿಂದ ಆಕೆ ಇಂತಹ ಮಾತುಗಳನ್ನು ಆಡಲು ಸಾಧ್ಯವಾಯಿತಾ? ಎನ್ನುವಂತೆ ಪ್ರಶ್ನೆಗಳು ಮೂಡಿವೆ.

- Advertisement -

Leave A Reply

Your email address will not be published.