The news is by your side.

ನಿರ್ವಾಣಹಟ್ಟಿ ಗ್ರಾಮದಲ್ಲಿ ಪೌಷ್ಠಿಕಾಂಶ ಅಭಿಯಾನ

ಕುಪೋಷಣೆ ಸರ್ವರೋಗಗಳಿಗೆ ಕಾರಣ : ಸವಿತಾ

ಬೆಳಗಾವಿ. ಗ್ರಾಮೀಣ ಭಾಗದ ಕಿಶೋರಿಯರಲ್ಲಿ ಬಹುಸಂಖ್ಯಾತರು ಅಪೌಷ್ಠಿಕತೆಯಿಂದ ಬಳಲುತ್ತಿದ್ದು, ಅನೇಕ ಖಾಯಿಲೆಗಳಿಗೆ ಓಳಗಾಗಿ ಮಕ್ಕಳು ಹಾಸಿಗೆ ಹಿಡಿಯುತ್ತಿದ್ದಾರೆ ಎಂದರೆ ಅದಕ್ಕೆ ಅವರಲ್ಲಿರುವ ಕುಪೋಷಣೆಯೆ ಕಾರಣ ಎಂದು ಅರ್ಥಶಾಸ್ತ್ರ ಉಪನ್ಯಾಸಕಿ ಕುಮಾರಿ ಸವಿತಾ ನಗಾರಿ ಅಭಿಪ್ರಾಯಪಟ್ಟರು. ತಾವು ದಿನನಿತ್ಯ ಸೇವಿಸಬೇಕಾದ ಆಹಾರ, ಮತ್ತು ಅವುಗಳಲ್ಲಿ ಇರುವ ವಿಟ್ಯಾಮಿನ್‍ಗಳ ಕುರಿತು ಗ್ರಾಮೀಣ ಮಕ್ಕಳಲ್ಲಿ ಮತ್ತು ತಾಯಂದಿರಲ್ಲಿ ಅರಿವು ಮೂಡಿಸಲಿ ಪೋಷಣ ಅಭಿಯಾನದ ಅಂಗವಾಗಿ ಮಹಿಳಾ ಕಲ್ಯಾಣ ಸಂಸ್ಥೆಯ ಮೂಲಕ ಇಂತಹ ಸ್ಫರ್ಧೆಗಳನ್ನು ಕಿಶೋರಿಯರೊಗೆ ಆಯೋಜಿಸಲಾಗುತ್ತಿದೆ ಎಂದರು.

ಹುಕ್ಕೇರಿ ತಾಲೂಕಿನ ನಿರ್ವಾನಹಟ್ಟಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಿಶೋರಿಯರಿಗಾಗಿ ಪೌಷ್ಠಕಾಂಶ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಹಾಗೂ ಪೌಷ್ಠಕಾಂಶ ತಯಾರಿಕೆ ಸ್ಫರ್ಧೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಮಹಿಳಾ ಕಲ್ಯಾಣ ಸಂಸ್ಥೆಯ ನಗರ ಕುಟುಂಬ ಕಲ್ಯಾಣ ಕೇಂದ್ರದ ಶ್ರೀಮತಿ ಶಾಹೀನ ಹೊಂಬಳ ಮಾತನಾಡಿ ವೈವಿಧ್ಯಮಯ ಹಣ್ಣು ಹಂಪಲ, ಹಸಿ ತರಕಾರಿ, ಕಾಳುಗಳು,ಹಾಲು, ಮುಂತಾದವುಗಳು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಲಭ್ಯವಿದ್ದರೂ ಅವುಗಳನ್ನು ಹೇಗೆ ಆಹಾರದಲ್ಲಿ ಬಳಸಬೇಕು ಅನ್ನುವ ಅಜಾಗೃತಿಯಿಂದಾಗಿ ಮಕ್ಕಳು ಖಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದರು. ಉತ್ತಮ ಆರೋಗ್ಯಭ್ಯಾಸಗಳನ್ನು ವಿದ್ಯಾರ್ಥಿಗಳು ರೂಢಿಸಿ ಕೊಳ್ಳಬೇಕು ಹೆಚ್ಚಿನ ಅಂಕಗಳಿಸಲು ವ್ಯಾಯಮ ಪೌಷ್ಠಕಯುತ ಆಹಾರ, ಮನರಂಜನೆ, ಆಟ, ಸತತ ಅಧ್ಯಯನ ಸಹಕಾರಿಯಾಗಲಿದೆ ಎಂದರು.

Shree Panjurlli Fine Dine ADD

- Advertisement -

Leave A Reply

Your email address will not be published.