ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಸಿಸಿಬಿ ಪೊಲೀಸರು ಇಂದು ಮತ್ತೊಬ್ಬ ಆರೋಪಿ ಮನೆಗೆ ರೈಡ್ ನಡೆಸಿದ್ದಾರೆ. ಹೆಬ್ಬಾಳದಲ್ಲಿರುವ ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವ ಮನೆಯ ಮೇಲೆ ಸಿಸಿಬಿ ಪೊಲೀಸರು ಬೆಳಿಗ್ಗೆ ದಾಳಿ ಮಾಡಿದ್ದಾರೆ.
ಸರ್ಚ್ ವಾರಂಟ್ ಪಡೆದಿದ್ದ ಸಿಸಿಬಿ ಪೊಲೀಸರು ಮನೆಗೆ ದಾಳಿ ನಡೆಸಿ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಮಾಜಿ ಸಚಿವ ಜೀವರಾಜ್ ಆಳ್ವ ಮತ್ತು ನಂದಿನಿ ಆಳ್ವ ಅವರ ಪುತ್ರನಾಗಿರುವ ಆದಿತ್ಯ ಆಳ್ವ ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದಲ್ಲಿ 6 ನೇ ಆರೋಪಿಯಾಗಿದ್ದಾನೆ. ಪ್ರಕರಣ ಬೆಳಕಿಗೆ ಬಂದ ನಂತರದಲ್ಲಿ ಆದಿತ್ಯ ಆಳ್ವ ಕುಟುಂಬ ನಾಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಸಿಸಿಬಿ ರೈಡ್ ಮಾಡಿ ಪರಿಶೀಲನೆ ನಡೆಸುತ್ತಿದೆ.
ಡ್ರಗ್ಸ್ ಕೇಸ್ ನಲ್ಲಿ ಗೋಲ್ಡ್ ಬ್ಯುಸಿನೆಸ್ ಮ್ಯಾನ್ ವೈಭವ್ಗೆ ಮಾಜಿ ಸಚಿವ ದಿ.ಜೀವರಾಜ್ ಆಳ್ವಾ ಪುತ್ರ ಆದಿತ್ಯಾ ಆಳ್ವಾ ಸಾಥ್ ನೀಡುತ್ತಿದ್ದನಂತೆ. ವೈಭವ್ ಪಾರ್ಟಿ ಆಯೋಜಿಸಲು ಆದಿತ್ಯ ಮಾನ್ಯತಾ ಟೆಕ್ ಪಾರ್ಕ್ ಬಳಿಯ ಜಾಗದ ವ್ಯವಸ್ತೆ ಮಾಡಿದ್ದ.ತನ್ನ ಹೌಸ್ ಆಫ್ ಲೀವ್ ಪಕ್ಕದ ಫಾರಂ ಹೌಸ್ & ಕಿಟ್ ಕ್ಲೋಕ್ಕನ್ ನಲ್ಲಿ ಆಯೋಜನೆ ಮಾಡ್ತಿದ್ದರು. ಅದಕ್ಕೆ ನಾನು ಮತ್ತೆ ರಾಗಿಣಿ ಸಾಥ್ ನೀಡಲು ಶುರುಮಾಡಿದ್ವಿ. ನಮ್ಮ ಮೊಬೈಲ್ ನಂಬರ್ ಕಾಂಟ್ಯಾಕ್ಟ್ ಬಳಸಿಕೊಂಡ್ವಿ. ದೊಡ್ಡ ದೊಡ್ಡವರ ಮಕ್ಕಳನ್ನ ಪಾರ್ಟಿಗೆ ಕರೆಸುತ್ತಿದ್ವಿ. ಒಟ್ಟಿಗೆ ಸೇರಿ ಈ ಬ್ಯೂಸಿನೆಸ್ ನಡೆಸುತ್ತಿದ್ದೇವೆ ಅಂತ ರವಿಶಂಕರ್ ಹೇಳಿದ್ದಾನೆ.
