The news is by your side.

ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಮದುವೆ ರಹಸ್ಯ ಬಯಲು.

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಹೊರ ಬರುತ್ತಿದ್ದಂತೆ ನಟಿಯರ ಪರ್ಸನಲ್ ಲೈಫ್ ನ ಕೆಲವು ಸಿಕ್ರೇಟ್ ಗಳು ಕೂಡ ಬಯಲಾಗುತ್ತಿವೆ. ನಟಿ ಸಂಜನಾ ಡಾ. ಅಜೀಜ್​ ಪಾಷಾ ಜೊತೆ ಮದುವೆ ಆಗಿದ್ದಾರೆ ಅಂತ ಸಾಕಷ್ಟು ಗಾಳಿ ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಸಂಜನಾ ಹಾಗೂ ಅಜೀಜ್ ಪಾಷಾ ಮ್ಯಾರೇಜ್ ಫೋಟೋವೊಂದು ಸಖತ್ ವೈರಲ್​ ಆಗಿದೆ.

ನನಗೆ ಮದುವೆಯಾಗಿಯೇ ಇಲ್ಲ ಅಂತ ಸಂಜನಾ ಹೇಳಿಕೊಂಡು ಓಡಾಡುತ್ತಿದ್ದರು. ಡ್ರಗ್ಸ್​ ಪ್ರಕರಣದಲ್ಲಿ ನಟಿ ಸಂಜನಾಳನ್ನು ಸಿಸಿಬಿ ಪೊಲೀಸರಿಂದ ಅರೆಸ್ಟ್ ಮಾಡುತ್ತಿದ್ದಂತೆ ಸಂಜನಾರ ವಿವಾಹ ವಿಚಾರವಾಗಿ ಸಾಕಷ್ಟು ಮಾತುಗಳು ಕೇಳಿ ಬಂದಿದ್ದವು. ನಟಿ ಸಂಜನಾ ಮತ್ತು ಅಜೀಜ್​ ಪಾಷಾ ಇಬ್ಬರೂ ಲಿವ್​ ಇನ್ ರಿಲೇಷನ್​ಶಿಪ್​ನಲ್ಲಿ ಇದ್ದರು ಎಂದು ಹೇಳಲಾಗುತ್ತಿತ್ತು.ಆದರೆ ಈಗ ಇಬ್ಬರು ವಧು ವರರ ರೀತಿ ಹಾರ ಹಾಕಿಕೊಂಡು ಅಕ್ಕಪಕ್ಕದಲ್ಲೇ ಕುಳಿತಿರುವ ಫೋಟೋ ಹೊರ ಬಂದಿದೆ. ಇದನ್ನು ನೋಡಿದವರು ಸಂಜನಾಳಿಗೆ ಮದುವೆಯಾಗಿದ್ದೀಯಾ ಅಂತ ಮಾತನಾಡೋದಕ್ಕೆ ಸ್ಟಾರ್ಟ್ ಮಾಡಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಮೇಲೆ ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ‘ನಾನಿನ್ನೂ ಮದುವೆ ಆಗಿಲ್ಲ ಅಂತ ಹೇಳಿದ್ದರು. ಮದುವೆ ಆಗದ ಹೆಣ್ಣುಮಗಳ ಬಗ್ಗೆ ಹೀಗೆಲ್ಲ ಮಾತಾಡೋದು ಎಷ್ಟು ಸರಿ’ ಎಂದು ಸಹ ಸಂಬರಗಿಯನ್ನು ಪ್ರಶ್ನಿಸಿದ್ದರು. ಬಳಿಕ ಸಂಜನಾ ಅರೆಸ್ಟ್ ಆಗುತ್ತಿದ್ದಂತೆ ಡಾ.ಅಜೀಜ್​ ಪಾಷಾ ನಡುವೆ ಸಂಜನಾ ಆಪ್ತತೆ, ಸಂಜನಾ ಪಾಲ್ಗೊಳ್ಳುತ್ತಿದ್ದ ಎಲ್ಲ ಪಾರ್ಟಿಯಲ್ಲೂ ಆ ವೈದ್ಯ ಪಾಲ್ಗೊಳ್ಳುತ್ತಿದ್ದರು ಎಂಬುದರ ಬಗ್ಗೆಯೂ ಸುದ್ದಿಯಾಗಿತ್ತು. ಇದೀಗ ಅವರಿಬ್ಬರೂ ಮದುವೆ ಆಗಿದ್ದಾರೆ ಎನ್ನಲಾದ ಫೋಟೋವೊಂದು ವೈರಲ್​ ಆಗಿದ್ದು,ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ನಟಿ ಸಂಜನಾ ಗಲ್ರಾನಿ ಕದ್ದು ಮುಚ್ಚಿ ಏನಾದ್ರೂ ಡಾ. ಅಜೀಜ್​ ಪಾಷಾರನ್ನು ಮ್ಯಾರೇಜ್ ಆಗಿದ್ದರಾ..? ಮದುವೆಯಾಗಿದ್ದರು ಪತಿಯ ವಿಷಯವನ್ನು ಸಂಜನಾ ಮುಚ್ಚಿಟ್ಟಿರೋದು ಯಾಕೆ.? ಸಂಜನಾ ನಾನು ಇನ್ನೂ ಮದುವೆಯನ್ನೇ ಆಗಿಲ್ಲ ಎಂದಿದ್ದೇಕೆ.? ಇದರ ಹಿಂದಿನ ಉದ್ದೇಶವೇನು.? ರಿಯಲ್​ ಗಂಡನ ಬಗ್ಗೆ ಸುಳ್ಳು ಹೇಳಿದ್ಯಾಕೆ..? ಅಂತ ಹಲವು ಅಭಿಮಾನಿಗಳು, ನೆಟ್ಟಿಗರು ಪ್ರಶ್ನೆಸುತ್ತಿದ್ದಾರೆ.ವೈರಲ್ ಆಗಿರೋ ಪೋಟೋ ಕುರಿತು ಸ್ವತಃ ನಟಿ ಸಂಜನಾನೇ ಸ್ಪಷ್ಟನೆ ನೀಡಬೇಕಿದೆ.

- Advertisement -

Leave A Reply

Your email address will not be published.