The news is by your side.

ಅಂಗಡಿತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯ, ಬೆಳಗಾವಿ

ಅಭಿಯಂತರ ದಿನಾಚರಣೆ ಹಾಗೂ ಸೆಂಟರಆಫ್‍ಎಕ್ಸಲೆನ್ಸ ಫಾರ ಆರ್ಟಿಫಿಸಿಯಲ್ ಇಂಟೆಲಿಜೆನ್ಸ, ಐಓಟಿ ಹಾಗೂ ರೋಬೊಟಿಕ್ಸ್ ಲ್ಯಾಬ ಉದ್ಘಾಟನೆ-2020

ಭವಿಷ್ಯದ ದಿನಗಳಲ್ಲಿ ತ್ರೀಡಿ ಪ್ರಿಂಟಿಂಗಟೆಕ್ನಾಲಜಿ, ರೋಬೋಟಿಕ್ಸ್ ಕ್ಷೇತ್ರಗಳಲ್ಲಿ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ ಪಾತ್ರ ಬಹು ಮುಖ್ಯವಾಗಿದ್ದು, ಇಲ್ಲಿ ಈ ಕೋರ್ಸನ್ನುಕಲಿಯುವ ವಿದ್ಯಾರ್ಥಿಗಳು ಪ್ರಾಯೋಗಿಕ ಪ್ರೊಜೆಕ್ಟ ಮಾಡಲುಅನುಕೂಲಕರ ವಾತಾವರಣ ನಿರ್ಮಾಣವಾಗಿದ್ದು ಈ ಲ್ಯಾಬನ್ನು ಸಮರ್ಪಕವಾಗಿ ಬಳಸಿಕೊಳ್ಳಬೆಕೆಂದು ಬೆಂಗಳೂರಿನ ಟೆಕ್ವೆಡ್‍ಲ್ಯಾಬ್ ನಿರ್ದೇಶಕ ಹಾಗೂ ಕಾರ್ಯನಿರ್ವಾಹಕಅಧಿಕಾರಿ ಸುಪ್ರಿತ ವಾಯ್.ಎಸ್. ಕರೆ ನೀಡಿದರು.

ನಗರದಅಂಗಡಿತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಮಂಗಳವಾರ, ದಿನಾಂಕ 15.09.2020ರಂದು ನಡೆದಇಂಜನೀಯರ್ಸ ದಿನಾಚರಣೆ ಅಂಗವಾಗಿ 2020-21 ನೇ ಸಾಲಿಗಾಗಿ ಪ್ರಥಮವಾಗಿ ಪ್ರಾರಂಭವಾದ ಆರ್ಟಿಫಿಸಿಯಲ್ ಇಂಜನೀಯರಿಂಗ್ ಕೋರ್ಸಿಗೆ ಬೇಕಾಗುವ ಸೆಂಟರ್‍ಆಫ್‍ಎಕ್ಸಲೆನ್ಸ್ ಫಾರ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್, ಐಓಟಿ ಹಾಗೂ ರೋಬೋಟಿಕ್ಸ್ ಲ್ಯಾಬನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಚಾರ್ಯಡಾ. ಆನಂದದೇಶಪಾಂಡೆ ಅಧ್ಯಕ್ಷತೆವಹಿಸಿ ಮಾತನಾಡಿ, ಸರ್. ಎಂ.ವಿಶ್ವೇಶ್ವರಯ್ಯರವರು ಮಾಡಿದಂತ ಕಾರ್ಯಗಳು ಎಲ್ಲ ಇಂಜನೀಯರುಗಳಿಗೆ ಸ್ಪೂರ್ತಿ. ಅವರಆದರ್ಶ, ತತ್ವಗಳನ್ನು ಎಲ್ಲ ಇಂಜನೀಯರುಗಳು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್‍ಕೋರ್ಸಗೆ ಪ್ರವೇಶ ಪಡೆದುಕೊಂಡ ವಿದ್ಯಾರ್ಥಿನಿ ಅವಂತಿಕಾ ಪಾಟೀಲ,À ಪಾಲಕರಾದ ಮಾಧವ ಪಾಟೀಲ ಹಾಗೂ ಕಿರಣ ಪಾಟೀಲ, ಟೆಕ್ವೆಡ್‍ಲ್ಯಾಬ್‍ನ ನಿರ್ದೇಶಕಆದಿತ್ಯಎಸ್.ಕೆ., ಡೀನ್ ಪ್ರೊ. ಅಮರ ಬ್ಯಾಕೋಡಿ, ಪ್ಲೇಸಮೆಂಟಅಧಿಕಾರಿ ಪ್ರೊ. ವಿಶಾಲಕೀರ್ತಿ ಪಾಟೀಲ, ಡಾ. ಸಂಜಯ ಪೂಜಾರಿ, ಡಾ. ಬಸವರೆಡ್ಡಿ, ಡಾ. ರಾಜೇಂದ್ರಇನಾಮದಾರ ಸೇರಿದಂತೆಎಲ್ಲ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರುಗಳುಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪ್ರಭಾರಿ ಸಿವ್ಹಿಲ್ ಇಂಜನೀಯರಿಂಗ ವಿಭಾಗದ ಮುಖ್ಯಸ್ಥ ಪ್ರೊ. ಎಂ.ವಿ. ಕಂಠಿ ಸ್ವಾಗತಿಸಿ ನಿರೂಪಿಸಿದರು.

Shree Panjurlli Fine Dine ADD

- Advertisement -

Leave A Reply

Your email address will not be published.