The news is by your side.

ಮೋದಿ ಜನ್ಮ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ

ಗೋಕಾಕ: ಭಾರತೀಯ ಜನತಾ ಪಾರ್ಟಿ ಗೋಕಾಕ ನಗರ ಮಂಡಲದಿಂದ ಸೇವಾ ಸಪ್ತಾಹ,ಪಂಡಿತ್ ದೀನ ದಯಾಳ್, ಗಾಂಧಿ ಜಯಂತಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಜರುಗಿತು.

ನಗರದ ಶ್ರೀ ನಗರ ಬಡಾವಣೆಯ ಉದ್ಯಾನವನದ ಆವರಣದಲ್ಲಿ ಬೆಳಿಗ್ಗೆ 8 ಗಂಟೆಗೆ ಹತ್ತು ಸಸಿಗಳನ್ನು ನೆಟ್ಟು ನೀರೂನಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮನ್ನವರ, ಪ್ರಧಾನ ಕಾರ್ಯದರ್ಶಿ ಜಯಾನಂದ ಹುಣಶ್ಯಾಳ, ಜಿಲ್ಲಾ ಉಪಾಧ್ಯಕ್ಷ ಶಾಮಾನಂದ ಪೂಜಾರಿ, ಕಾರ್ಯದರ್ಶಿ ಬಸವರಾಜ ಹಿರೇಮಠ, ಮಾಜಿ ಅಧ್ಯಕ್ಷ ಶಶಿಧರ ದೇಮಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಕೋಲಾರ, ನಗರಸಭೆ ಸದಸ್ಯರಾದ ಅಬ್ಬಾಸ ದೇಸಾಯಿ, ಶಿವಪ್ಪ ಗುಡ್ಡಾಕಾಯು, ಸೇವಾ ಸಪ್ರಾಹದ ಮುಖ್ಯಸ್ಥ ಕಿರಣ ಡಮಾಮಗರ, ಮುತ್ತುರಾಜ ಜಮಖಂಡಿ, ಲಕ್ಕಪ್ಪ ತಹಶಿಲ್ದಾರ, ಲಕ್ಷ್ಮಣ ತಳ್ಳಿ, ಸಚೀನ ಕಮಟೇಕರ, ಬಿಜೆಪಿ ಪಕ್ಷದ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.

- Advertisement -

Leave A Reply

Your email address will not be published.