The news is by your side.

ಕೋವಿಡ್: ಎಲ್ಲರಿಗೂ ಮಾದರಿಯಾದ ಸಚಿವೆ

ಬೆಳಗಾವಿ: ನಿಜಕ್ಕೂ ಇದು ಅಪರೂಪದ ಸುದ್ದಿ. ‌ರಾಜ್ಯ ಸಚಿವೆ ಶಶಿಕಲಾ ಜೊಲ್ಲೆ ಅವರು ಕೋವಿಡ್ ಸೋಂಕಿಗೆ ಒಳಗಾದರೂ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಅವರು ನೀಡಿದ ಪ್ರಕಟಣೆ ಹೀಗಿದೆ..
“ಜನರಿಗಾಗಿ, ಜನರೊಂದಿಗೆ ನಾನು ಸದಾ!
ಪ್ರಜೆಗಳೊಂದಿಗೆ ಬೆರೆತರೆ ಮಾತ್ರ ಅವರ ನೋವು-ನಲಿವು, ಸುಖ-ದುಃಖಗಳಿಗೆ ಸರಿಯಾಗಿ ಸ್ಪಂದಿಸಬಹುದು ಎಂದು ನಂಬಿ, ಈ ಕ್ಷಣದವರೆಗೂ ಅದನ್ನೇ ಪಾಲಿಸುತ್ತಾ ಬಂದಿದ್ದೇನೆ.

ಕೊವಿಡ್ ಮಹಾಮಾರಿಗೆ ಜನರು ಭಯಪಟ್ಟಿರುವುದು ಬಹಳ ಬೇಸರದ ಸಂಗತಿ. ಈ ಕಾಲಘಟ್ಟದಲ್ಲೂ ಅವರಿಗೆ ಜತೆಯಾಗಿ ಧೈರ್ಯ ತುಂಬುವ ಸಲುವಾಗಿ ನಿಪ್ಪಾಣಿಯ ನಮ್ಮ ಸಿ.ಬಿ.ಎಸ್.ಸಿ ಆವರಣದಲ್ಲಿ ನಿರ್ಮಿಸಲಾದ ಕೊವಿಡ್ ಕೇರ್ ಆಸ್ಪತ್ರೆಗೆ ದಾಖಲಾಗಿ, ನನ್ನ ಪ್ರಜೆಗಳೊಂದಿಗೆ ಕೊವಿಡ್ ಚಿಕಿತ್ಸೆ ಪಡೆಯುತ್ತಿದ್ದೇನೆ. ನಿಮ್ಮೆಲ್ಲರ ಹಾರೈಕೆ ಹಾಗೂ ಆಶೀರ್ವಾದಗಳಿಂದ ಗುಣಮುಖಳಾಗುತ್ತಿದ್ದೇನೆ.”

Shree Panjurlli Fine Dine ADD

- Advertisement -

Leave A Reply

Your email address will not be published.