The news is by your side.

ಪೌರಕಾರ್ಮಿಕರ ವಸತಿ ಸಮುಚ್ಛಯ ಕಟ್ಟಡಗಳ ಉದ್ಘಾಟನೆ

 

ಗೋಕಾಕ: ಪೌರಕಾರ್ಮಿಕರು ಸ್ವಂತ ಕಟ್ಟಡ ಹೊಂದಬೇಕೆಂದು ಬಹುದಿನಗಳ ಬೇಡಿಕೆಯನ್ನು ಇಡೇರಿಸಲಾಗಿದೆ. ಈ ಬಾರಿ ಕೇವಲ 15 ಜನ ಪೌರಕಾರ್ಮಿಕರಿಗೆ ಕಟ್ಟಡ ನಿಡಿದ್ದೇವೆ, ಮುಂದಿನ ದಿನಮಾನಗಳಲ್ಲಿ ಎಲ್ಲ ಪೌರಕಾರ್ಮಿಕರಿಗೆ ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜನ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ರವಿವಾರದಂದು ನಗರದ ಅಡಿಬಟ್ಟಿ ಕಾಲೋನಿಯಲ್ಲಿ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿಯಲ್ಲಿ ಅಂದಾಜು ರೂ.130.00 ಲಕ್ಷಗಳಡಿ ಜಿ+2ಮಾದರಿಯಲ್ಲಿ ನಿರ್ಮಿಸಿದ ಪೌರಕಾರ್ಮಿಕರ ವಸತಿ ಸಮುಚ್ಛಯ ಕಟ್ಟಡಗಳನ್ನು ಉದ್ಘಾಟನೆ ನೆರವೇರಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.
ದೇಹಲಿಗೆ ಹೋಗಿದ್ದು ಮಾಹಾದಾಯಿ ವಿಷಯ ಚರ್ಚಿಸಲು. ಮತ್ತು ನಾನು ಸಚಿವನಾದ ಮೇಲೆ ಹೈಕಮಾಂಡ ನಾಯಕರ ಭೇಟಿ ಆಗಿರಲಿಲ್ಲ, ಅವರಿಗೆ ದನ್ಯವಾದ ತಿಳಿಸಲು ಹೊಗಿದ್ದೆ, ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಚಿಸಲು ದೇವೆಂದ್ರ ಫಡ್ನವೀಸ್ ಪಾತ್ರ ಪ್ರಮುಖ. ಹೀಗಾಗಿ ದೇಹಲಿಯಿಂದ ವಾಪಾಸ್ಸಾಗುವಾಗ ಮುಂಬೈನಲ್ಲಿ ಫಡ್ನವೀಸ್ ಭೇಟಿ ಮಾಡಿರುವದಾಗಿ ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿ, ಸಚಿವ ಸ್ಥಾನ ಆಕಾಂಕ್ಷಿಯಾದ ಎಲ್ಲರಿಗೂ ಸಚಿವ ಸ್ಥಾನ ಸಿಗಲಿ ಹಾಗೂ ಉಮೇಶ ಕತ್ತಿಯವರು ನನ್ನ ಹಳೆಯ ಗೆಳೆಯ ಅವರಿಗೆ ಸಚಿವ ಸ್ಥಾನ ಸಿಕ್ಕರೆ ಖುಷಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅಬ್ಬಾಸ ದೇಸಾಯಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ಶಿವಾನಂದ ಹತ್ತಿ, ಬಸವರಾಜ ಆರೇನ್ನವರ, ಸಿದ್ದಪ್ಪ ಹುಚ್ಚರಾಯಪ್ಪಗೋಳ, ಜಯಾನಂದ ಹುಣಶ್ಯಾಳ, ಬಿಜೆಪಿ ರಾಜ್ಯ ಮಹಿಳಾ ಉಪಾಧ್ಯಕ್ಷೆ ಪ್ರೇಮಾ ಭಂಡಾರಿ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ತಾಪಂ ಸದಸ್ಯ ಕಿರಣ ಬೆಣಚಿನಮರಡಿ, ಜ್ಯೋತಿಭಾ ಸುಬಂಜಿ, ಲಕ್ಷ್ಮಣ ಖಡಕಬಾಂವಿ, ಬಸವರಾಜ ಹಿರೇಮಠ, ಶಿವಾನಂದ ಚೌಕಾಶಿ, ಯಲ್ಲಪ್ಪ ಹಳ್ಳೂರ, ಮುತ್ತುರಾಜ ಜಮಖಂಡಿ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಅಧಿಕಾರಿಗಳಾದ ವಿ ಎಮ್ ಸಾಲಿಮಠ, ವಿನೋದ ಪಾಟೀಲ, ಹಳ್ಳೂರ, ಗುತ್ತಿಗೇದಾರ ಬಸವರಾಜ ಗಂಗರೆಡ್ಡಿ ಸೇರಿದಂತೆ ಅನೇಕರು ಇದ್ದರು.
.

Shree Panjurlli Fine Dine ADD

- Advertisement -

Leave A Reply

Your email address will not be published.