The news is by your side.

75 ಲಕ್ಷ ಲೂಟಿ: ತಹಶಿಲ್ದಾರರ ಕಚೇರಿ ವಂಚನೆ ಗೆ ಕ್ಲರ್ಕ್ ಸಸ್ಪೆಂಡ್

 

ಸುರಪುರ: ಕಳೆದ ಮೂರು ದಿನಗಳಿಂದ ತೀವ್ರ ಸಂಚಲನ ಮೂಡಿಸಿದ್ದ ಸುರಪುರ ತಹಸೀಲ್ದಾರ್ ಬ್ಯಾಂಕ್ ಖಾತೆಯಿಂದ 75 ಲಕ್ಷಕ್ಕೂ ಅಧಿಕ ಹಣ ವಂಚನೆ ಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ತಹಸೀಲ್ ಕಚೇರಿಯ ಸಹಾಯಕ ಸಿ.ಎಸ್.ರಾಜು ಎನ್ನುವವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಈ ಯಾದಗಿರಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ತಹಸೀಲ್ ಕಚೇರಿಯಲ್ಲಿ ನೈಸರ್ಗಿಕ ವಿಕೋಪದ ಪ್ರಕರಣಗಳ ಕುರಿತು ಕರ್ತವ್ಯ ನಿರ್ವಹಿಸಲು ಕಚೇರಿಯ ಪ್ರಥಮ ದರ್ಜೆ ಸಹಾಯಕ ಸಿ.ಎಸ್.ರಾಜು ಎನ್ನುವವರನ್ನು ನೇಮಿಸಲಾಗಿದ್ದು, ಸಿ.ಎಸ್.ರಾಜು ಕರ್ತವ್ಯ ಲೋಪದಿಂದಾಗಿ ಜೂನ್ 1 ರಂದು ತಹಸೀಲ್ದಾರ್ ಸುರಪುರ ಬ್ಯಾಂಕ್ ಖಾತೆಯಿಂದ 75 ಲಕ್ಷಕ್ಕೂ ಅಧಿಕ ಹಣ ವಂಚನೆ ನಡೆದಿದೆ.ಈ ಪ್ರಕರಣಕ್ಕೆ ಮೂಲವಾಗಿರುವ ಚೆಕ್ ಪ್ರತಿಯನ್ನು ಎಕ್ಸಿಸ್ ಬ್ಯಾಂಕಲ್ಲಿ ಕೆಲಸ ಮಾಡುವ ವಿಜಯಕುಮಾರ್ ಚೌದ್ರಿ ಎಂಬುವವನು ಕದ್ದು ತೆಗೆದುಕೊಂಡರು ಸಿ.ಎಸ್.ರಾಜು ಮೂರು ತಿಂಗಳಾದರು ನೋಡದಿರುವುದು ಹಾಗೂ ಕಳೆದ ಮೂರು ತಿಂಗಳಿಂದ ತಹಸೀಲ್ದಾರ್ ಸುರಪುರ ಬ್ಯಾಂಕ್ ಖಾತೆಯ ವ್ಮವಹಾರದ ವಿವರವನ್ನು ಬ್ಯಾಂಕ್‌ನಿಂದ ಪಡೆದು ಪುಸ್ತಕದಲ್ಲಿ ದಾಖಲಿಸುದಾಗಲಿ ಹಾಗು ತಹಸೀಲ್ದಾರರ ಗಮನಕ್ಕೆ ತರದೇ ಕರ್ತವ್ಯಲೋಪ ಎಸಗಿರುವುದಕ್ಕಾಗಿ ಸಿ.ಎಸ್.ರಾಜು ಎಂಬುವವರನ್ನು ಅಮಾನತ್ತು ಮಾಡಿರುವುದಾಗಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Shree Panjurlli Fine Dine ADD

- Advertisement -

Leave A Reply

Your email address will not be published.