The news is by your side.

ಪೌಪ್ಠಿಕ ಆಹಾರ ಜಾಗೃತಿ ಅಗತ್ಯ

ಹುಕ್ಕೇರಿ ತಾಲೂಕಿನ ಯಲ್ಲಾಪೂರ ಗ್ರಾಮದ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆ ಅಡಿಯಲ್ಲಿ ಪೋಷಣ ಅಭಿಯಾನದ ಅಂಗವಾಗಿ ಕಿಶೋರಿಯರಿಗೆ ಪೌಪ್ಠಿಕ ಆಹಾರ ತಯಾರಿಕೆ ಸ್ಪರ್ಧೆ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಡಾ:ಕೀರ್ತಿ ಚೌಗಲಾ ಅವರು ಸದೃಢ ಆರೋಗ್ಯಕ್ಕೆ ಪೌಪ್ಠಿಕಯುತವಾದ ಆಹಾರ ಸೇವನೆ ಅಗತ್ಯವಾಗಿದೆ. ಅತ್ಯಂತ ಹೇರಳವಾಗಿ ಗ್ರಾಮೀಣ ಪ್ರದೇಶದಲ್ಲಿ ಲಭ್ಯವಿರುವ ಹಸಿರು ತರಕಾರಿ, ಹಣ್ಣು, ಧವಸಧಾನ್ಯಗಳಲ್ಲಿ ಲಭ್ಯವಿರುವ ವಿಟಾಮಿನ್ ಬಗ್ಗೆ ಅಜಾಗೃತಿಯಿಂದ ಗ್ರಾಮೀಣ ಪ್ರದೇಶದವರು ಸೇವಿಸದೆ ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಪೌಪ್ಠಿಕ ಆಹಾರ ಸೇವನೆ ಬಗ್ಗೆ ಜಾಗೃತಿ ಅಗತ್ಯವಾಗಿದೆ ಎಂದರು. ನಗರ ಕುಟುಂಬ ಕಲ್ಯಾಣ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಾದ ಪ್ರಿಯಾಂಕಾ ಉಂಡಿ, ಸುಮಿತ್ರಾ ದೇಮಟ್ಟಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಉಪಸ್ಥಿತರಿದ್ದರು. ಕರಗುಪ್ಪಿ, ಯಲ್ಲಾಪೂರ ಗ್ರಾಮಗಳ ಕೀಶೋರಿಯರು ಭಾಗವಹಿಸಿ ವಿವಿಧ ಬಗೆಯ ಪೌಪ್ಠಿಕ ಆಹಾರ ತಯಾರಿಸಿದ್ದರು. ಪ್ರದರ್ಶನದಲ್ಲಿ ಉತ್ತಮ ಆಹಾರ ತಯಾರಿಸಿದ ಕಿಶೋರಿಯರಿಗೆ ಬಹುಮಾನ ವಿತರಣೆ ಮಾಡಲಾಯಿತು.

Shree Panjurlli Fine Dine ADD

- Advertisement -

Leave A Reply

Your email address will not be published.