The news is by your side.

ನಮ್ಮೂರ ಬಾನುಲಿ ಕೇಂದ್ರದಿಂದ ಕಿಶೋರಿ ಸಂಘಗಳಿಗೆ ರೇಡಿಯೋ ವಿತರಣೆ

ಹುಕ್ಕೇರಿ ಮಹಿಳಾ ಕಲ್ಯಾಣ ಸಂಸ್ಥೆಯ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ಮೂಲಕ ಹುಕ್ಕೇರಿ ತಾಲೂಕಿನ 10 ಗ್ರಾಮಗಳಲ್ಲಿರುವ ಕಿಶೋರಿಯರ ಸಂಘಗಳಿಗೆ ರೇಡಿಯೋ ಸೆಟ್ ವಿತರಣೆ ಮಾಡಲಾಯಿತು.ಕಾ

ರ್ಯಕ್ರಮದಲ್ಲಿರೇಡಿಯೋ ಸೆಟ್ ವಿತರಣೆಮಾಡಿ ಮಾತನಾಡಿದ ಡಾ: ಕೀರ್ತಿ ರೇಡಿಯೋಗಳು ಗ್ರಾಮೀಣ ಜನರ ಜೀವನಾಡಿಗಳಿದ್ದಂತೆ, ಗ್ರಾಮೀಣ ಸಂಸ್ಕøತಿಯ ವಾಹಕಗಳಾಗಿರುವ ರೇಡಿಯೋ ಕೇಳುವ ಅಭಿರುಚಿಯನ್ನು ಇಂದಿನ ಯವಜನಾಂಗದಲ್ಲಿ ಬೆಳೆಸಬೇಕಾಗಿದೆ ಎಂದರು.

ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಕಿರಣ ಚೌಗಲಾ ಮಾತನಾಡಿ ಗ್ರಾಮೀಣ ಜನರಲ್ಲಿರುವ ಪ್ರತಿಭೆ, ಮಹಿಳೆಯರು ಮತ್ತು ಮಕ್ಕಳಿಗೆ ಉಪಯುಕ್ತ ಮಾಹಿತಿ, ಜನಪದ ಕಲೆಗಳ ಪ್ರಸಾರ, ರೈತರಿಗೆ ಸಲಹೆ ನೀಡುವ ಉದ್ದೇಶದಿಂದ ರೇಡಿಯೋಗಳನ್ನು ಕಿಶೋರಿ ಸಂಘಗಳಿಗೆ ವಿತರಿಸಲಾಗಿದೆ ಎಂದರು.

ಹುಕ್ಕೇರಿ ತಾಲೂಕಿನ ಯರಗಟ್ಟಿ , ಯರನಾಳ, ಬಡಕುಂದ್ರಿ, ಗೌಡವಾಡ, ಬಡಕುಂದ್ರಿ, ಹೊಸುರು, ಹೂನ್ನುರು, ಕರಗುಪ್ಪಿ, ಯಲ್ಲಾಪೂರ, ಅರಳಿಕಟ್ಟಿ ಗ್ರಾಮಗಳ ಕಿಶೋರಿ ಸಂಘಗಳಿಗೆ ರೇಡಿಯೋ ಸೆಟ್‍ಗಳನ್ನು ವಿತರಿಸಿದರು.

Shree Panjurlli Fine Dine ADD

- Advertisement -

Leave A Reply

Your email address will not be published.