The news is by your side.

ಬೆಳಗಾವಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ರಾಗಿ ಪಾಟೀಲ ಆಯ್ಕೆ

 

ಬೆಳಗಾವಿ : ನ್ಯಾಯವಾದಿ ಎ ಜಿ ಮುಳವಾಡಮಠ್ ನಿಧನದಿಂದ ತೆರವಾಗಿದ್ದ ಬೆಳಗಾವಿ ಬಾರ್ ಅಸೊಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ನ್ಯಾಯವಾದಿ ದಿನೇಶ ಪಾಟೀಲ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಶನಿವಾರ ನಡೆದ ಸಭೆಯಲ್ಲಿ ಈ ಕುರಿತು ನಿರ್ಧರಿಸಿದ ಬಾರ್ ಅಸೊಸಿಯೇಷನ್ ಸದಸ್ಯರು ಹಿರಿಯ ನ್ಯಾಯವಾದಿ ಪಾಟೀಲ್ ಅವರನ್ನು ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಾರ್ ಅಸೊಸಿಯೇಷನ್ ಉಪಾಧ್ಯಕ್ಷ ಸಿ.ಟಿ.
ಮಜಗಿ, ಗಜಾನನ ಪಾಟೀಲ್, ಪ್ರಧಾನ ಕಾರ್ಯದರ್ಶಿ ಆರ್.ಸಿ. ಪಾಟೀಲ್, ಜಂಟಿ ಕಾರ್ಯದರ್ಶಿ ಶಿವಪುತ್ರ ಫಟಕಲ್, ಸದಸ್ಯರಾದ ಕಲ್ಮೇಶ ಮಾಯನ್ನಾಚೆ, ನಿತಿನ್ ಗಾಣಗಿ, ಪ್ರಭಾಕರ್ ಪವಾರ್, ರಮೇಶ ಗುಡೋದಗಿ, ಬಸವರಾಜ್ ಓಸಿ, ಸರಿತಾ ಶೇಯಕರ್ ಉಪಸ್ಥಿತರಿದ್ದರು.

Shree Panjurlli Fine Dine ADD

- Advertisement -

Leave A Reply

Your email address will not be published.