The news is by your side.

ಸೋಮವಾರ ಸುವರ್ಣಸೌಧದಲ್ಲಿ ಆರ್ ಸಿ ಯು ಘಟಿಕೋತ್ಸವ

 

ಬೆಳಗಾವಿ : ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 8 ನೇ ಘಟಿಕೋತ್ಸವ ಸೋಮವಾರ ಅ. 5 ರಂದು ಸುವರ್ಣ ಸೌಧದ ನೆಲಮಹಡಿಯಲ್ಲಿ ಜರುಗಲ್ಲಿದೆ.

ಪತ್ರಿಕಾಗೋಷ್ಠಿಯಲ್ಲಿ ಘಟಿಕೋತ್ಸವದ ಮಾಹಿತಿ ನೀಡಿದ ವಿಶ್ವವಿದ್ಯಾಲಯದ ಕುಲಪತಿ ಪ್ರೊ ರಾಮಚಂದ್ರನ್, ಕೊರೋನಾ ಸಾಂಕ್ರಾಮಿಕ ಹಿನ್ನಲೆಯಲ್ಲಿ ಸುವರ್ಣಸೌಧದ ನೆಲಮಹಡಿಯಲ್ಲಿ ಘಟಿಕೋತ್ಸವ ನಡೆಯಲ್ಲಿದೆ. ಘಟಿಕೋತ್ಸವದಲ್ಲಿ ಗೋವಿಂದರಾಜ್, ಪದ್ಮಶ್ರೀ ಪುರಸ್ಕೃತ ಮೋಹನದಾಸ ಪೈ ಹಾಗೂ ಶ್ರೀಮನ್ ಮಹಾರಾಜ್ ನಿರಂಜನ ಜಗದ್ಗುರು ರಾಜಯೋಗೀಂದ್ರ ಮಹಾಸ್ವಾಮಿಗಳಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಲಾಗುವುದು ಎಂದರು.

ಕೋವಿಡ್ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯದ ಕುಲಾಧಿಪತಿಯಾದ ರಾಜ್ಯಪಾಲ ವಜುಭಾಯಿ ವಾಲಾ, ಉನ್ನತ ಶಿಕ್ಷಣ ಸಚಿವ ಸುರೇಶ ಕುಮಾರ್ ಆಗಮಿಸುತ್ತಿಲ್ಲ.

ಘಟಿಕೋತ್ಸವದಲ್ಲಿ 11 ಸುವರ್ಣ ಪದಕ ಸ್ನಾತಕ ತರಗತಿಗಳಿಗೆ, 22 ಸುವರ್ಣ ಪದಕಗಳು ಸ್ನಾತಕೋತ್ತರ ತರಗತಿಗಳಿಗೆ ನೀಡಲಾಗುವುದು. 4 ವಿಷಯಗಳಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಾಯೋಜಿತ ಪದಕಗಳೊಂದಿಗೆ 79 ಪಿಎಚ್.ಡಿ ಪದವಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಕುಲಸಚಿವ ಬಸವರಾಜ ಪದ್ಮಸಾಲಿ, ಮೌಲ್ಯಮಾಪನ ಕುಲಸಚಿವರು ಎಂ.ಎಸ್.ಹುರಕಡ್ಲಿ, ಹಣಕಾಸು ಅಧಿಕಾರಿ ಡಿ.ಎನ್‌.ಪಾಟೀಲ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Shree Panjurlli Fine Dine ADD

- Advertisement -

Leave A Reply

Your email address will not be published.