The news is by your side.

ಪತ್ರಕರ್ತ ಎಚ್.ಎಚ್.ಬೇಪಾರಿಗೆ ತಾಲೂಕ ರಾಜ್ಯೋತ್ಸವ ಪ್ರಶಸ್ತಿ

ಹುನಗುಂದ: ಸಮೀಪದ ಅಮೀನಗಡ ಪಟ್ಟಣದ ಕ್ರೀಯಾಶೀಲ ಪತ್ರಕರ್ತ ಎಚ್.ಎಚ್.ಬೇಪಾರಿ ಅವರ ಪತ್ರಿಕೋಧ್ಯಮ ಸೇವೆಯನ್ನು ಗುರುತಿಸಿ ತಾಲೂಕ ಆಡಳಿತ ಮಂಡಳಿ ತಾಲೂಕಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ನಗರದ ತಾಲೂಕ ಆಡಳಿತ ಭವನದಲ್ಲಿ ತಾಲೂಕಾ ಆಡಳಿತ ಮಂಡಳಿ ವತಿಯಿಂದ ಹಮ್ಮಿಕೊಂಡ 65ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಹಾಗೂ ಸಾಧಕರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ,ಕಳೆದ ಹಲವಾರು ವರ್ಷಗಳಿಂದ ಪತ್ರಿಕೋಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತ ಎಚ್.ಎಚ್.ಬೇಪಾರಿ ಅವರ ಸಾಧನೆ ಗುರುತಿಸಿ ತಾಲೂಕ ಆಡಳಿತ ಮಂಡಳಿ ವತಿಯಿಂದ ತಾಲೂಕಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು.

ಸ್ಥಳದಲ್ಲಿ ಹುನಗುಂದ ಮತಕ್ಷೇತ್ರದ ಶಾಸಕ ದೊಡ್ಡನಗೌಡ ಜಿ, ಪಾಟೀಲ, ಹುನಗುಂದ ತಹಶೀಲ್ದಾರ ಬಸವರಾಜ ನಾಗರಾಳ,ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ಮಹಾಂತೇಶ ಹಳ್ಳೂರ,ಖ್ಯಾತ ವೈದ್ಯರಾದ ಡಾ.ಮಹಾಂತೇಶ ಕಡಪಟ್ಟಿ ಸೇರಿದಂತೆ ಇನ್ನಿತರರು ಇದ್ದರು.

Shree Panjurlli Fine Dine ADD

- Advertisement -

Leave A Reply

Your email address will not be published.