The news is by your side.

ಪತ್ರಕರ್ತ ಬೇಪಾರಿಗೆ ಸಿದ್ದನಕೊಳ್ಳದ ಶ್ರೀಗಳಿಂದ ಸನ್ಮಾನ

ಅಮೀನಗಡ: ತಾಲೂಕಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅಮೀನಗಡ ಪಟ್ಟಣದ ಪತ್ರಕರ್ತ ಎಚ್.ಎಚ್.ಬೇಪಾರಿ ಅವರಿಗೆ ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ.ಶಿವಕುಮಾರ ಸ್ವಾಮೀಜಿ ಸನ್ಮಾನ ಮಾಡಿ ಗೌರವಿಸಿದರು.

ಸಮೀಪದ ಸುಕ್ಷೇತ್ರ ಸಿದ್ದನಕೊಳ್ಳದಲ್ಲಿ ಪತ್ರಕರ್ತ ಬೇಪಾರಿ ಅವರಿಗೆ ಸನ್ಮಾನ ಮಾಡಿ ಮಾತನಾಡಿದ ಶ್ರೀಗಳು,ಸೇವಾ ಮನೋಭಾವದಿಂದ ಕಳೆದ ಹಲವಾರು ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನಮ್ಮ ಮಠದ ಶಿಷ್ಯರಾಗಿರುವ ಪತ್ರಕರ್ತ ಎಚ್.ಎಚ್.ಬೇಪಾರಿ ಅವರಿಗೆ ತಾಲೂಕಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು ನಮಗೆ ತುಂಬ ಸಂತಸವಾಗಿದೆ ಇದೇ ರೀತಿ ಅವರ ಸೇವೆ ನಿರಂತರವಾಗಿರಲಿ ಹಾಗೂ ಮುಂಬರುವ ದಿನಮಾನಗಳಲ್ಲಿ ಇನ್ನು ಅವರಿಗೆ ಉನ್ನತವಾದ ಗೌರವಸಿಗಲಿ ಎಂದರು

ಸ್ಥಳದಲ್ಲಿ ಹುನಗುಂದ ಪಟ್ಟಣದ ಮಹಾಂತೇಶ ಸುಂಕದ ದಂಪತಿಗಳು,ಸಿದ್ದಾರ್ಥ ಜಾಲಿಹಾಳ, ಹನಮೇಶ ಪಾಗದ,ಅಶೋಕ ವಡೆಗೋಲ,ಸಂಗಮೇಶ ಚನ್ನಿ ಸೇರಿದಂತೆ ಇನ್ನಿತರರು ಇದ್ದರು.

Shree Panjurlli Fine Dine ADD

- Advertisement -

Leave A Reply

Your email address will not be published.