
City Big News Desk.
ಬೆಂಗಳೂರು: ಬೆಂಗಳೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಶಾಲೆಯಲ್ಲೇ 10 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಲಾಗಿದೆ. ವರ್ತೂರು ಸಮೀಪದ ಖಾಸಗಿ ಶಾಲೆಯೊಂದರಲ್ಲಿ ಘಟನೆ ನಡೆದಿದ್ದು ವರ್ತೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲಾ ಸಂಸ್ಥಾಪಕ ಮತ್ತು ಪ್ರಾಂಶುಪಾಲನಾಗಿರುವ ವ್ಯಕ್ತಿಯೇ ಕೃತ್ಯ ಎಸಗಿರುವ ಆರೋಪ ಕೇಳಿ ಬಂದಿದೆ.
10 ವರ್ಷದ ವಿದ್ಯಾರ್ಥಿನಿ ಎಂದಿನಂತೆ ಶಾಲೆಗೆ ತೆರಳಿದ್ದಳು. ಶಾಲೆಗೆ ಬಂದ ವಿದ್ಯಾರ್ಥಿನಿಯನ್ನು ಕಂಡ ಕಾಮುಕ ಪ್ರಾಂಶುಪಾಲ ವಿದ್ಯಾರ್ಥಿನಿಯನ್ನು ಖಾಲಿ ರೂಮಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.
ಮನೆಗೆ ಬಂದ ಮಗಳು ನೋವು ತಾಳದೆ ಒದ್ದಾಡಿದನ್ನು ಕಂಡ ಪೋಷಕರು ಮಗಳ ಬಳಿ ವಿಚಾರಿಸಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಈ ವೇಳೆ ಕೃತ್ಯ ಬಯಲಾಗಿದೆ. ವರ್ತೂರು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಅತ್ಯಾಚಾರಕ್ಕೊಳಗಾದ ಬಾಲಕಿ ನರದೌರ್ಬಲ್ಯ ಕಾಯಿಲೆಯಿಂದ ಬಳಲುತ್ತಿದ್ದಳು. ಗುಂಜೂರು ಸಮೀಪದ ಖಾಸಗಿ ಶಾಲೆಯಲ್ಲಿ 2ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದಳು. ನಿನ್ನೆ ಬೆಳಗ್ಗೆ 8.30 ಕ್ಕೆ ಶಾಲೆಗೆ ತೆರಳಿದ್ದು.
ಮೊದಲು ಪ್ರಾಂಶುಪಾಲರ ಕೊಠಡಿಗೆ ಕರೆದುಕೊಂಡು ಹೋದರು. ವಿಶ್ರಾಂತಿ ಪಡೆಯುವಂತೆ ಹೇಳಿ ಅತ್ಯಾಚಾರ ಎಸಗಿದರು. ನಂತರ ಕೇಕ್ ತಿನ್ನಿಸಿ ಕಳುಹಿಸಿದರು ಎಂದು ಪುಟ್ಟ ಬಾಲಕಿ ತಾಯಿಯ ಮುಂದೆ ಕೃತ್ಯವನ್ನು ವಿವರಿಸಿದ್ದಾಳೆ.
ಮಧ್ಯಾಹ್ನ 3.30 ಕ್ಕೆ ಮನೆಗೆ ಬಂದು. ತಾಯಿ ಬಳಿ ಹೊಟ್ಟೆ ನೋವು ಎಂದು ಹೇಳಿದಾಗ. ಸ್ನಾನ ಮಾಡಿಸುತ್ತಿರವಾಗ ರಕ್ತದ ಕಲೆಗಳು ಕಂಡು. ತಾಯಿ ಕೇಳಿದಾಗ ಪುಟ್ಟ ಬಾಲಕಿ ಘಟನೆ ವಿವರಿಸಿದ್ದಾಳೆ.
ಮಗುವಿಗೆ ಹೆಚ್ಚಿನ, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಪ್ರಕರಣದ ಬಗ್ಗೆ ವರ್ತೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವರದಿಗಾರ
ಕೋಲಾರ ರೆಡ್ಡಿ
City Big News.
Disclaimer: This Story is auto-aggregated by a Syndicated Feed and has not been Created or Edited By City Big News Staff.