Please assign a menu to the primary menu location under menu

international

ನಾಸಾ-ನ್ಯಾಷನಲ್‌ ಜಿಯೋಗ್ರಫಿ ನಡುವೆ ಒಪ್ಪಂದ

ನಾಸಾ-ನ್ಯಾಷನಲ್‌ ಜಿಯೋಗ್ರಫಿ ನಡುವೆ ಒಪ್ಪಂದ

ವಾಷಿಂಗ್ಟನ್‌: ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ), ತನ್ನ ಆ್ಯರಿಯನ್‌ ಬಾಹ್ಯಾಕಾಶ ನೌಕೆಯ ಮೂಲಕ 2023ರಲ್ಲಿ ಚಂದ್ರನ ಅಧ್ಯಯನಕ್ಕೆ ತೆರಳಲು ಉದ್ದೇಶಿಸಿದೆ.

ಅಲ್ಲಿಗೆ, ದಶಕಗಳ ನಂತರ ಚಂದ್ರನ ಅಧ್ಯಯನಕ್ಕೆ ವಿಜ್ಞಾನಿಗಳು ಖುದ್ದಾಗಿ ತೆರಳುವ ಪ್ರಕ್ರಿಯೆಗೆ ಪುನಃ ಚಾಲನೆ ಸಿಗಲಿದೆ. ಆ ಯೋಜನೆ ಬಗ್ಗೆ ಸಾಕ್ಷ್ಯಚಿತ್ರ ತಯಾರಿಸಿ, ಪ್ರಸಾರ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ, “ನ್ಯಾಷನಲ್‌ ಜಿಯಾಗ್ರಾಫಿಕ್‌’ ಜತೆಗೆ ನಾಸಾ ಒಪ್ಪಂದ ಮಾಡಿಕೊಂಡಿದೆ.

ಮುಂದಿನ ವರ್ಷಗಳಲ್ಲಿ ಗಗನಯಾತ್ರಿಗಳಾಗಬೇಕು ಎಂಬ ಉತ್ಸಾಹಿಗಳಿಗೆ ಈ ಸಾಕ್ಷ್ಯಚಿತ್ರದಿಂದ ಮಾರ್ಗದರ್ಶಿಯಾಗುವಂತೆ ಇರಬೇಕು ಎಂಬ ಆಶಯದೊಂದಿಗೆ ನಾಸಾ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಾಕ್ಷ್ಯಚಿತ್ರಕ್ಕೆ ನಿರ್ಮಾಣಕ್ಕೆ ಬೇಕಾದ ಎಲ್ಲಾ ಅಗತ್ಯ ಮಾಹಿತಿಗಳನ್ನು ನಾಸಾ ನೀಡಲಿದ್ದು, ಸಾಕ್ಷ್ಯಚಿತ್ರವನ್ನು ಸಾಮಾಜಿಕ ಜಾಲತಾಣ, ಮುದ್ರಣ, ವೆಬ್‌ಸೈಟ್‌, ಚಾನೆಲ್‌ಗ‌ಳಲ್ಲಿ ಪ್ರಸಾರ ಮಾಡುವಂತೆ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ.

ಅಂದಹಾಗೆ, ಈಗ ಯೋಜಿಸಿರುವಂತೆ, “ಆರ್ಟಿಮಸ್‌’ನ ಮೊದಲ ಭಾಗ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ.


Leave a Reply

error: Content is protected !!