Please assign a menu to the primary menu location under menu

National

ಶ್ವಾನವನ್ನು ಹಿಂಸಿಸುತ್ತಿದ್ದವನಿಗೆ ಗೂಸಾ ಕೊಟ್ಟ ಹಸು..! ವೈರಲ್​ ಆಯ್ತು ವಿಡಿಯೋ

ಶ್ವಾನವನ್ನು ಹಿಂಸಿಸುತ್ತಿದ್ದವನಿಗೆ ಗೂಸಾ ಕೊಟ್ಟ ಹಸು..! ವೈರಲ್​ ಆಯ್ತು ವಿಡಿಯೋ

ಪ್ರಾಣಿಗಳಿಗೆ ಹಿಂಸೆ ಮಾಡುವುದನ್ನು ದೇವರೂ ಸಹಿಸುವುದಿಲ್ಲ ಎಂಬ ಮಾತಿದೆ. ಹೀಗಾಗಿ ಎಲ್ಲೆಲ್ಲಿ ಪ್ರಾಣಿಗಳಿಗೆ ಹಿಂಸೆ ಆಗುತ್ತಿರೋದು ಗಮನಕ್ಕೆ ಬರುತ್ತದೋ ಆ ಎಲ್ಲಾ ಸಂದರ್ಭಗಳಲ್ಲೂ ಧ್ವನಿ ಎತ್ತುವ ಅಧಿಕಾರ ಪ್ರತಿಯೊಬ್ಬ ಮಾನವನಿಗೂ ಇದೆ.

ಪ್ರಾಣಿಗಳ ಮೇಲೆ ಹಿಂಸೆ ನಡೆಯುತ್ತಿರುವಾಗ ಅದನ್ನು ತಪ್ಪಿಸಲು ಇನ್ನೊಬ್ಬ ಮಾನವನೇ ಬರಬೇಕು ಎಂದೇನಿಲ್ಲ. ಮತ್ತೊಂದು ಪ್ರಾಣಿಯೇ ಸಾಕು ಎಂಬುದನ್ನ ವೈರಲ್​ ವಿಡಿಯೋವೊಂದು ಹೇಳಿದೆ.

ವ್ಯಕ್ತಿಯೊಬ್ಬ ಶ್ವಾನಕ್ಕೆ ಹಿಂಸೆ ನೀಡುತ್ತಿದ್ದ ಅಮಾನವೀಯ ವಿಡಿಯೋವೊಂದನ್ನು ಅರಣ್ಯಾಧಿಕಾರಿ ಸುಸಂತಾ ನಂದಾ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.

ಇದರಲ್ಲಿ ವ್ಯಕ್ತಿಯೊಬ್ಬ ನಾಯಿಯ ಕುತ್ತಿಗೆಯನ್ನು ಹಿಡಿದು ಮೇಲಕ್ಕೆ ಎತ್ತುತ್ತಿದ್ದಾನೆ.ಇದರಿಂದ ತೀವ್ರತರವಾದ ನೋವನ್ನು ಅನುಭವಿಸುತ್ತಿದ್ದ ಶ್ವಾನವು ಅಳುತ್ತಿರುವ ದೃಶ್ಯ ಕರುಳು ಹಿಂಡುವಂತಿತ್ತು. ಆದರೆ ಈ ವಿಡಿಯೋ ಕೊನೆಯಲ್ಲಿ ಮಾತ್ರ ಭರ್ಜರಿ ಟ್ವಿಸ್ಟ್​ ಕಾದಿದೆ..!

ಶ್ವಾನಕ್ಕೆ ಕಿಡಿಗೇಡಿಯ ಹಿಂಸೆ ಕೊಡುವುದನ್ನು ಮುಂದುವರಿಸುತ್ತಲೇ ಇದ್ದನು. ಈ ವೇಳೆ ಎಲ್ಲಿಂದಲೋ ಬಂದ ಹಸುವು ಶ್ವಾನವನ್ನು ಪಕ್ಕಕ್ಕೆ ತಳ್ಳಿದೆ. ಬಳಿಕ ಹಿಂಸೆ ನೀಡುತ್ತಿದ್ದ ವ್ಯಕ್ತಿಗೆ ಸರಿಯಾಗೆ ಡಿಚ್ಚಿ ಕೊಟ್ಟಿದೆ. ವ್ಯಕ್ತಿಯನ್ನು ನೆಲಕ್ಕೆ ಕೆಡವಿದ ಹಸುವು ಆತನನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್​ ಆಗಿದೆ.


 




Leave a Reply

error: Content is protected !!