Please assign a menu to the primary menu location under menu

Entertainment

ಗಂಡನ ಮನೆಗೆ ನಗುನಗುತ್ತಾ ತೆರಳಿದ ವಧು: ಮುದ್ದಾದ ವಿಡಿಯೋ ವೈರಲ್

ಗಂಡನ ಮನೆಗೆ ನಗುನಗುತ್ತಾ ತೆರಳಿದ ವಧು: ಮುದ್ದಾದ ವಿಡಿಯೋ ವೈರಲ್

ಭಾರತೀಯ ಸಂಪ್ರದಾಯದಲ್ಲಿ ಮದುವೆಯಾದ ನಂತರ ವಧುವನ್ನು ಗಂಡನ ಮನೆಗೆ ಕಳುಹಿಸಿ ಕೊಡುವ ಶಾಸ್ತ್ರವು ಅತ್ಯಂತ ದುಃಖಕರವಾಗಿದೆ. ಹೆಚ್ಚಾಗಿ ಎಲ್ಲಾ ಹೆಣ್ಣುಮಕ್ಕಳು ಈ ವೇಳೆ ಅತ್ತು ಗೋಳಾಡುತ್ತಾರೆ. ಆದರೆ, ಇಲ್ಲೊಬ್ಬಳು ವಧುವು ತನ್ನ ವಿದಾಯದ ವೇಳೆ ನಗು-ನಗುತ್ತಾ ಗಂಡನ ಮನೆಗೆ ತೆರಳಿರುವ ವಿಡಿಯೋ ವೈರಲ್ ಆಗಿದೆ.

ಎಶಿತಾ ತುಕ್ರಾಲ್ ಎಂದು ಗುರುತಿಸಲಾದ ವಧುವು ಮದುವೆ ಎಲ್ಲಾ ಮುಗಿದ ಬಳಿಕ ಕೊನೆಗೆ ವಿದಾಯದ ಆಚರಣೆ ಮಾಡುವಾಗ ನಗು-ನಗುತ್ತಾ ತನ್ನ ಪೋಷಕರನ್ನು ಸಂತೈಸಿದ್ದಾಳೆ.

ಈ ಉಲ್ಲಾಸದ ವಿಡಿಯೋವನ್ನು ಮದುವೆಯ ಛಾಯಾಗ್ರಾಹಕರಾದ ಹ್ಯಾಪಿಫ್ರೇಮ್ಸ್ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ, ಎಶಿತಾ ತುಕ್ರಾಲ್ ತನ್ನ ಮದುವೆ ಮುಗಿದ ಬಳಿಕ ವಿದಾಯದ ಕ್ಷಣದ ಆಚರಣೆಯನ್ನು ನಗು-ನಗುತ್ತಾ ನಿರ್ವಹಿಸುತ್ತಿರುವುದನ್ನು ಕಾಣಬಹುದು. ಅಲ್ಲದೆ ತಾನು ಅಳಲು ಸಾಧ್ಯವಿಲ್ಲ. ಮೇಕಪ್ ಹಾಳಾಗುತ್ತದೆ ಅಂತೆಲ್ಲಾ ಹೇಳುತ್ತಾ ತನ್ನ ಗಂಡನ ಮನೆಗೆ ಹೊರಡಲು ಸಜ್ಜಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.


Leave a Reply

error: Content is protected !!