ಬೆಳಗಾವಿ: ರಸ್ತೆ ಪಕ್ಕ ನಿಂತಿದ್ದ ಕ್ಯಾಂಟರ್ಗೆ ಇನ್ನೊವಾ ಕಾರು ಗುದ್ದಿದ ಪರಿಣಾಮ ಮಗ ಸೇರಿ ವೈದ್ಯ ದಂಪತಿ ಮೃತಪಟ್ಟ ಘಟನೆ ಹುಕ್ಕೇರಿ ತಾಲೂಕಿನ ನರಸಿಂಗಪುರ ಗ್ರಾಮದ ಬಳಿ ಸಂಭವಿಸಿದೆ.
ಸಂಕೇಶ್ವರ ಪಟ್ಟಣದ ವೈದ್ಯೆ ಡಾ. ಶ್ವೇತಾ ಮುರಗೋಡ (40), ಪುತ್ರಿ ಶಿಯಾ (7) ಸ್ಥಳದಲ್ಲೇ ಸಾವನೊಪ್ಪಿದ್ದರೇ, ಖ್ಯಾತ ನೇತ್ರ ವೈದ್ಯ ಡಾ. ಸಚಿನ್ ಮುರಗೋಡ ಅವರು ಕೆಎಲ್ಇ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿತ್ತು. ಗಂಭೀರ ಗಾಯಗೊಂಡಿದ್ದ ಅವರೂ ಕೂಡ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ.
ದಂಪತಿ ಬೆಳಗಾವಿಯಿಂದ ಸಂಕೇಶ್ವರಕ್ಕೆ ಹೋಗುತ್ತಿರುವಾಗ ನರಸಿಂಗಪುರ ಗ್ರಾಮದಲ್ಲಿ ಬಳಿ ಈ ಘಟನೆ ನಡೆದಿದೆ. ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.