ಹಾವೇರಿ : ಅಪ್ಪನ ಜೊತೆ ಜಗಳವಾಡಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಜೋಕಾಲಿಯಲ್ಲಿ ನೇಣು ಬಿಗಿದುಕೊಂಡು 4ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ಶೇಷಗಿರಿಯಲ್ಲಿ ನಡೆದಿದೆ.
ಚೇತನ್ (9) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ, ಆಲ್ದೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 4 ನೇ ತರಗತಿ ಓದುತ್ತಿದ್ದ ಎನ್ನಲಾಗಿದೆ.
ಗುರುವಾರ ಹಾವೇರಿ ಜಿಲ್ಲೆ ಶೇಷಗಿರಿ ಗ್ರಾಮದ ಜಾತ್ರೆಗೆ ಕುಟುಂಬದವರ ಜೊತೆ ತೆರಳಿದ್ದ, ಶುಕ್ರವಾರ ಅಪ್ಪನ ಜಗಳ ಮಾಡಿಕೊಂಡಿದ್ದ, ಈ ವೇಳೆ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯಲ್ಲಿದ್ದ ಜೋಕಾಲಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.