Please assign a menu to the primary menu location under menu

international

ಅಮೆಜ಼ಾನ್ ಡಿವೈಸ್‌ಗಳಲ್ಲಿ ರೆಕಾರ್ಡ್ ಆದ ತನ್ನ ದನಿಯ 3,500 ಕ್ಕೂ ಅಧಿಕ ಫೈಲ್‌ ಕಂಡು ದಂಗಾದ ಮಹಿಳೆ

ಅಮೆಜ಼ಾನ್ ಡಿವೈಸ್‌ಗಳಲ್ಲಿ ರೆಕಾರ್ಡ್ ಆದ ತನ್ನ ದನಿಯ 3,500 ಕ್ಕೂ ಅಧಿಕ ಫೈಲ್‌ ಕಂಡು ದಂಗಾದ ಮಹಿಳೆ

ತಮ್ಮ ದನಿಯಲ್ಲಿರುವ ಮಾಹಿತಿಗಳಿರುವ 3,500ಕ್ಕೂ ಹೆಚ್ಚಿನ ಫೈಲ್‌ಗಳು ಅಮೆಜ಼ಾನ್ ಡಿವೈಸ್‌ಗಳ ದತ್ತಾಂಶದಲ್ಲಿರುವುದನ್ನು ಕಂಡ ಮಹಿಳೆಯೊಬ್ಬರು ಟಿಕ್‌ ಟಾಕ್ ವಿಡಿಯೋವೊಂದರಲ್ಲಿ ಈ ಸಂಬಂಧ ಶಾಕ್ ವ್ಯಕ್ತಪಡಿಸಿದ್ದಾರೆ. ತಮ್ಮ ಮನೆಯಲ್ಲಿ ಅಮೆಜ಼ಾನ್‌ Read more…

ತಮ್ಮ ದನಿಯಲ್ಲಿರುವ ಮಾಹಿತಿಗಳಿರುವ 3,500ಕ್ಕೂ ಹೆಚ್ಚಿನ ಫೈಲ್‌ಗಳು ಅಮೆಜ಼ಾನ್ ಡಿವೈಸ್‌ಗಳ ದತ್ತಾಂಶದಲ್ಲಿರುವುದನ್ನು ಕಂಡ ಮಹಿಳೆಯೊಬ್ಬರು ಟಿಕ್‌ ಟಾಕ್ ವಿಡಿಯೋವೊಂದರಲ್ಲಿ ಈ ಸಂಬಂಧ ಶಾಕ್ ವ್ಯಕ್ತಪಡಿಸಿದ್ದಾರೆ.

ತಮ್ಮ ಮನೆಯಲ್ಲಿ ಅಮೆಜ಼ಾನ್‌ ನ ಮೂರು ಡಿವೈಸ್‌ ಗಳಿದ್ದು, ಇದರಲ್ಲಿ ಎರಡು ಎಕೋ ಡಾಟ್ ಸ್ಪೀಕರ್‌ಗಳು ಹಾಗೂ ಮನೆಯಲ್ಲಿರುವ ಸ್ಮಾರ್ಟ್‌ ಲೈಟ್ ಬಲ್ಬ್‌ಗಳ ನಿಯಂತ್ರಣಕ್ಕಾಗಿ ಒಂದು ಎಕೋ ಡಿವೈಸ್ ಇದೆ.

ತಮ್ಮ ಡಿವೈಸ್‌ಗಳಲ್ಲಿ ಸಂಗ್ರಹವಾದ ಎಲ್ಲಾ ದತ್ತಾಂಶವನ್ನು ನೀಡುವಂತೆ ಅಮೆಜ಼ಾನ್‌ನಲ್ಲಿ ಕೇಳಿಕೊಂಡ ಮಹಿಳೆಗೆ ಈ ಸಂಗತಿ ತಿಳಿದು ಬೆಕ್ಕಸಬೆರಗಾಗಿದೆ. ಈ ದತ್ತಾಂಶದಲ್ಲಿ ಬರೀ ದನಿಯ ಫೈಲ್‌ಗಳು ಮಾತ್ರವಲ್ಲದೇ ತಮ್ಮ ವೈಯಕ್ತಿಕ ಸಂಪರ್ಕಗಳ ಮಾಹಿತಿಯೂ ಕಂಡು ಬಂದಿರುವ ವಿಚಾರವನ್ನು ಟಿಕ್‌ಟಾನ್‌ನಲ್ಲಿ ಶೇರ್‌ ಮಾಡಿಕೊಂಡ ಕ್ಲಿಪ್‌ನಲ್ಲಿ ಮಹಿಳೆ ತಿಳಿಸಿದ್ದಾರೆ.

ಅಮೆಜ಼ಾನ್‌ನ ಯಾವುದೇ ಡಿವೈಸ್‌ ಜೊತೆಗೆ ತಮ್ಮ ಸಂಪರ್ಕದ ವಿವರಗಳನ್ನು ಸಿಂಕ್ ಮಾಡಿಲ್ಲವೆಂದು ಈ ಮಹಿಳೆ ಹೇಳುತ್ತಾರಾದರೂ, ತನ್ನ ಎಕೋ ಡಿವೈಸ್‌ಗಳ ಬಳಕೆಗೂ ಮುನ್ನ ಸಂಪರ್ಕಗಳ ಸಿಂಕ್ ಮಾಡಲು ಅಮೆಜ಼ಾನ್ ಒತ್ತಿ ಕೇಳುತ್ತದೆ.

ಈ ವೈರಲ್ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಅಮೆಜ಼ಾನ್, ತನ್ನ ಡಿವೈಸ್‌ಗಳಲ್ಲಿರುವ ಮಾಹಿತಿಯನ್ನು ನಿಯಂತ್ರಿಸುವ ಸಾಧ್ಯತೆಯನ್ನು ಗ್ರಾಹಕರಿಗೆ ಕೊಟ್ಟಿರುವುದಾಗಿ ತಿಳಿಸಿದೆ.


Leave a Reply

error: Content is protected !!