Please assign a menu to the primary menu location under menu

State

ನಟ ಪುನೀತ್​ ರಾಜ್​ಕುಮಾರ್​ ಕೈಲಿದ್ದವು ಐದು ವರ್ಷಕ್ಕಾಗುವಷ್ಟು ಸಿನಿಮಾಗಳು..!

ನಟ ಪುನೀತ್​ ರಾಜ್​ಕುಮಾರ್​ ಕೈಲಿದ್ದವು ಐದು ವರ್ಷಕ್ಕಾಗುವಷ್ಟು ಸಿನಿಮಾಗಳು..!

ನಿನ್ನೆ ಬೆಳಗ್ಗೆಯವರೆಗೂ ಚೆನ್ನಾಗೇ ಇದ್ದ ನಟ ಪುನೀತ್​ ರಾಜ್​ಕುಮಾರ್​ ಅಗಲಿಕೆಯನ್ನು ಅರಗಿಸಿಕೊಳ್ಳಲು ಇನ್ನೂ ಸಾಧ್ಯವಾಗುತ್ತಿಲ್ಲ. ಚಂದನವನದಲ್ಲಿ ಬಾಲ ನಟನಾಗಿ, ನಾಯಕನಟನಾಗಿ ಅತ್ಯದ್ಭುತವಾಗಿ ಅಭಿನಯಿಸುತ್ತಿದ್ದ ಅಭಿಮಾನಿಗಳ ಅಪ್ಪು ದೊಡ್ಮನೆ ಕುಟುಂಬದ ಹೆಸರನ್ನು ಉತ್ತುಂಗಕ್ಕೆ ಏರಿಸಿದ್ದರು.

ನಟ ಪುನೀತ್​ರಾಜ್​ಕುಮಾರ್​ ನಿಧನದ ಬಳಿಕ ಅವರನ್ನೇ ನಂಬಿ ಬಂಡವಾಳ ಹಾಕಲು ಸಿದ್ಧರಿದ್ದ ನಿರ್ಮಾಪಕರಿಗೆ ದಿಕ್ಕೇ ತೋಚದಂತಹ ಪರಿಸ್ಥಿತಿ ಎದುರಾಗಿದೆ. ಭಾರೀ ಮೊತ್ತದ ಸಿನಿಮಾಗಳಲ್ಲೇ ನಟಿಸುತ್ತಿದ್ದ ಪುನೀತ್​​ರ ಬಹುತೇಕ ಸಿನಿಮಾಗಳು ಬಾಕ್ಸಾಫೀಸಿನಲ್ಲಿ ಗಲ್ಲಾಪೆಟ್ಟಿಗೆ ಸದ್ದು ಮಾಡುತ್ತಿದ್ದವು. ಹೀಗಾಗಿ ಅಪ್ಪುರನ್ನು ನಂಬಿ ಕೋಟಿಗಟ್ಟಲೇ ಬಂಡವಾಳ ಹೂಡಿದರೂ ಹಣ ವಾಪಾಸ್​ ಬರುತ್ತೆ ಎಂಬ ನಂಬಿಕೆ ನಿರ್ಮಾಪಕರದ್ದು.

ಇತ್ತೀಚೆಗಷ್ಟೇ ʼಜೇಮ್ಸ್ʼ​ ಚಿತ್ರದ ಭಾಗಶಃ ಶೂಟಿಂಗ್​ ಮುಗಿಸಿದ್ದ ನಟ ಪುನೀತ್​ ಕೈಯಲ್ಲಿ ಇನ್ನೂ ಐದು ಸಿನಿಮಾಗಳು ಇದ್ದವು. ಇದರಲ್ಲಿ ಮೂರು ಸಿನಿಮಾಗಳನ್ನು ಅನೌನ್ಸ್​ ಮಾಡಲಾಗಿತ್ತು. ಚೇತನ್​ ಕುಮಾರ್​ ಆ್ಯಕ್ಷನ್​ ಕಟ್​ ಹೇಳಿದ್ದ ʼಜೇಮ್ಸ್ʼ​ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿತ್ತು. ಇದಾದ ಬಳಿಕ ನಟ ಪುನೀತ್​​, ಪವನ್​ ಕುಮಾರ್​​ ನಿರ್ದೇಶನದ ದ್ವಿತ್ವ ಸಿನಿಮಾದಲ್ಲಿ ನಟಿಸುವವರಿದ್ದರು.

ಇನ್ನು ನಿರ್ದೇಶಕ ಕೃಷ್ಣ ಕೂಡ ಪುನೀತ್​ ರಾಜ್​ಕುಮಾರ್​ರಿಗಾಗಿ ಕತೆಯೊಂದನ್ನು ಹೆಣೆದಿದ್ದರು. ರಾ ಏಜೆಂಟ್​ ಆಗಿ ಈ ಸಿನಿಮಾದ ಮೂಲಕ ನಟ ಪುನೀತ್​ ತೆರೆ ಮೇಲೆ ಕಾಣಿಸಿಕೊಳ್ಳುವವರಿದ್ದರು. ಇದು ಮಾತ್ರವಲ್ಲದೇ ದಿನಕರ್​ ತೂಗುದೀಪ್​​ ಅವರ ಸಿನಿಮಾದಲ್ಲಿ ನಟಿಸುವುದಾಗಿಯೂ ಪವರ್ ಸ್ಟಾರ್​ ಸಹಿ ಹಾಕಿದ್ದರು. ಮಾತ್ರವಲ್ಲದೇ ಈ ಹಿಂದೆ ಪ್ರಥ್ವಿ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ನಿರ್ದೇಶಕ ಜೇಕಬ್​ ವರ್ಗೀಸ್​ ಜೊತೆ ಮತ್ತೊಂದು ಪ್ರಾಜೆಕ್ಟ್​ ಮಾಡಲು ಪುನೀತ್​ ಮನಸ್ಸು ಮಾಡಿದ್ದರು ಎನ್ನಲಾಗಿದೆ.

ಜೇಮ್ಸ್​ ಸಿನಿಮಾಗೆ ಬರೋಬ್ಬರಿ 8 ಕೋಟಿ ರೂಪಾಯಿ ಬಂಡವಾಳ ಹೂಡಲಾಗಿದೆ. ಇವೆಲ್ಲದರ ಜೊತೆಗೆ ನಟ ಪುನೀತ್​ ತಮ್ಮ ಹೋಂ ಬ್ಯಾನರ್​ನಲ್ಲಿ ಮ್ಯಾನ್ ಆಫ್​ ದಿ ಮ್ಯಾಚ್, ಒನ್​​ ಕಟ್​ ಟು ಕಟ್​ ಹಾಗೂ ಫ್ಯಾಮಿಲಿ ಪ್ಯಾಕ್​​ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು ಎನ್ನಲಾಗಿದೆ.

 


Leave a Reply

error: Content is protected !!