Please assign a menu to the primary menu location under menu

Entertainment

ಸಂಗೀತಕ್ಕೆ ಮಾರು ಹೋಗಿದ್ದರು ನಟ ಪುನೀತ್​; ವೈರಲ್​ ಆಗ್ತಿದೆ ಈ ವಿಡಿಯೋ

ಸಂಗೀತಕ್ಕೆ ಮಾರು ಹೋಗಿದ್ದರು ನಟ ಪುನೀತ್​; ವೈರಲ್​ ಆಗ್ತಿದೆ ಈ ವಿಡಿಯೋ

ಕರ್ನಾಟಕ ಜನತೆಯ ಪಾಲಿಗೇ ಅಪ್ಪು ಎಂದೇ ಚಿರಪರಿಚಿತರಾಗಿದ್ದ ಪುನೀತ್​ ರಾಜ್​ಕುಮಾರ್​ ಇಂದು ಕೊನೆಯುಸಿರೆಳೆದಿದ್ದಾರೆ. ಸಾಕಷ್ಟು ಸಿನಿಮಾಗಳ ಮೂಲಕ, ಗಾಯನಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ದೊಡ್ಮನೆ ಕುಟುಂಬದ ಕುಡಿ ಇಂದು ಇಹಲೋಕ ಯಾತ್ರೆಯನ್ನು ಮುಗಿಸಿದೆ.

ತಮ್ಮ ಅಪ್ರತಿಮ ನಟನೆ, ಅತ್ಯದ್ಭುತ ನೃತ್ಯ ಶೈಲಿ ಹಾಗೂ ಉತ್ತಮ ಕಂಠಸಿರಿಯ ಮೂಲಕ ಅಭಿಮಾನಿಗಳ ಪಾಲಿನ ನೆಚ್ಚಿನ ಹೀರೋ ಆಗಿದ್ದವರು ಪುನೀತ್​ ರಾಜ್​ಕುಮಾರ್​.

ಅಭಿಮಾನಿಗಳನ್ನು ಹೊಸ ಹೊಸ ಸಿನಿಮಾಗಳ ಮೂಲಕ ರಂಜಿಸಬೇಕಿದ್ದ ನಟ ಇಂದು ಈ ರೀತಿಯ ಕಹಿಸುದ್ದಿಯನ್ನೂ ನೀಡಿರೋದು ಮಾತ್ರ ನುಂಗಲಾರದ ತುತ್ತಾಗಿದೆ.

ಸರಳತೆ ಅನ್ನೋದು ದೊಡ್ಮನೆ ಕುಟುಂಬಕ್ಕೆ ಅಂಟಿದ ಗುಣ. ಅದರಂತೆ ಪುನೀತ್​ ಕೂಡ ಅತ್ಯಂತ ಸರಳ ಸ್ವಭಾವದ ವ್ಯಕ್ತಿ. ನಟನೆಯಲ್ಲಿ ಅಂತಹ ದೊಡ್ಡ ಸಾಧನೆ ಮಾಡಿದ್ದರೂ ಸಹ ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿದ್ದ ಜೀವ ಪುನೀತ್​. ಕೆಲ ದಿನಗಳ ಹಿಂದಷ್ಟೇ ನಟಸಾರ್ವಭೌಮ ಕೊಪ್ಪಳ ತಾಲೂಕಿನ ನಾರಾಯಣಪೇಟೆ ರೆಸಾರ್ಟ್​ಗೆ ಭೇಟಿ ನೀಡಿದ್ದರು. ಈ ವೇಳೆ ಆಫ್ರಿಕನ್​ ವಾದ್ಯವನ್ನು ಕೇಳಿದ್ದ ನಟ ಪುನೀತ್,​ ವಿದೇಶಿ ಸಂಗೀತಕ್ಕೆ ತಲೆತೂಗಿದ್ದರು. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ನಿನ್ನೆಯವರೆಗೂ ಆ್ಯಕ್ಟಿವ್​ ಆಗಿಯೇ ಇದ್ದ ಪುನೀತ್​​ ಇಂದು ಈ ರೀತಿಯಾಗಿ ಎಲ್ಲರನ್ನೂ ಅಗಲಿ ಹೋಗಿದ್ದಾರೆ ಎಂಬುದು ಅರಗಿಸಲು ಸಾಧ್ಯವೇ ಆಗದಂತಹ ವಾರ್ತೆಯಾಗಿದೆ. ಅಕ್ಟೋಬರ್​ 26ರ ಸಂಜೆ ಭಜರಂಗಿ 2 ಸಿನಿಮಾದ ಪ್ರಿ ರಿಲೀಸ್​ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಟ ಶಿವಣ್ಣ ಹಾಗೂ ಯಶ್​ ಜೊತೆ ಪುನೀತ್​ ಕೂಡ ಹೆಜ್ಜೆ ಹಾಕಿದ್ದರು. ಈ ವಿಡಿಯೋ ಕೂಡ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು .

 


Leave a Reply

error: Content is protected !!