Please assign a menu to the primary menu location under menu

Entertainment

ಕೇದಾರನಾಥಕ್ಕೆ ಭೇಟಿ ನೀಡಿ ಫೋಟೋ ಹಂಚಿಕೊಂಡ ನಟಿ ಸಾರಾ

ಕೇದಾರನಾಥಕ್ಕೆ ಭೇಟಿ ನೀಡಿ ಫೋಟೋ ಹಂಚಿಕೊಂಡ ನಟಿ ಸಾರಾ

ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಮತ್ತು ದಿವಂಗತ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಬಾಲಿವುಡ್ ನಿಂದಾಚೆಗೂ ಉತ್ತಮ ಸ್ನೇಹ ಹೊಂದಿದ್ದಾರೆ.

ಈ ಇಬ್ಬರು ನಟಿಯರಿಗೂ ಪ್ರವಾಸಕ್ಕೆ ಹೋಗುವುದೆಂದರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಕೇದರನಾಥಕ್ಕೆ ಭೇಟಿ ನೀಡಿದ ಸ್ನೇಹಿತೆಯರು, ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಕೇದಾರನಾಥ್ ಎಂಬ ಚಲನಚಿತ್ರದೊಂದಿಗೆ ತನ್ನ ಸಿನಿಮಾ ವೃತ್ತಿಜೀವನವನ್ನು ಪ್ರಾರಂಭಿಸಿದ ಸಾರಾ, ಜಾನ್ವಿಯೊಂದಿಗಿನ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಜೈ ಬೋಲೇನಾಥ ಅಂತೆಲ್ಲಾ ಹ್ಯಾಷ್ ಟ್ಯಾಗ್ ಗಳನ್ನು ಹಾಕಿದ್ದಾರೆ.

ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಇಬ್ಬರೂ 2018 ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಜಾನ್ವಿ ಕಪೂರ್, ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮೂಲಕ ಎಂಟ್ರಿ ಕೊಟ್ಟಿದ್ದರೆ, ಸಾರಾ ಅಲಿ ಖಾನ್ ಅವರು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಜೊತೆ ಕೇದಾರನಾಥ್ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈ ಚಿತ್ರವನ್ನು ಅಭಿಷೇಕ್ ಕಪೂರ್ ನಿರ್ದೇಶಿಸಿದ್ದಾರೆ.


 


Leave a Reply

error: Content is protected !!