Please assign a menu to the primary menu location under menu

Sports

ಒಂದು ಗಂಟೆಯಲ್ಲಿ 5,896 ಕೆ.ಜಿ. ತೂಕ ಎತ್ತಿ ಕ್ರೀಡಾಪಟುವಿನಿಂದ ʼಗಿನ್ನಿಸ್ʼ ದಾಖಲೆ

ಒಂದು ಗಂಟೆಯಲ್ಲಿ 5,896 ಕೆ.ಜಿ. ತೂಕ ಎತ್ತಿ ಕ್ರೀಡಾಪಟುವಿನಿಂದ ʼಗಿನ್ನಿಸ್ʼ ದಾಖಲೆ

ಒಂದು ಗಂಟೆಯಲ್ಲಿ ನೀವು ಎಷ್ಟು ತೂಕವನ್ನು ಎತ್ತಬಹುದು ? ಕೆನಡಾದ ಈ ಅಥ್ಲೀಟ್ ಕೇವಲ ಒಂದು ಗಂಟೆಯಲ್ಲಿ ಸುಮಾರು 13,000 ಪೌಂಡ್‌ಗಳನ್ನು (5896 ಕೆ.ಜಿ) ಎತ್ತಿ ಹೊಸ ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ.

ನೋಲನ್ ಡಿ ಲಿಯಾನ್ ಎಂಬುವವರು ಟರ್ಕಿಶ್ ಗೆಟ್-ಅಪ್ ಮೂಲಕ ಈ ನೂತನ ದಾಖಲೆಗೆ ಪಾತ್ರರಾಗಿದ್ದಾರೆ. ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮ್ಯಾನಿಟೋಬಾದ ಮೂಡ್ ಡಿಸಾರ್ಡರ್ಸ್ ಅಸೋಸಿಯೇಷನ್ ​​ಅನ್ನು ಬೆಂಬಲಿಸಲು ಲಿಯಾನ್ ಈ ದಾಖಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಛಾಯಾಗ್ರಾಹಕ ಮತ್ತು ಇಬ್ಬರು ತೀರ್ಪುಗಾರರ ಸಮ್ಮುಖದಲ್ಲಿ ಇವರು ಮಾಡಿದ ದಾಖಲೆಯನ್ನು ನೇರಪ್ರಸಾರ ಮಾಡಲಾಯಿತು. ಟರ್ಕಿಶ್ ಗೆಟ್-ಅಪ್ ಒಂದು ರೀತಿಯ ವ್ಯಾಯಾಮವಾಗಿದ್ದು, ಒಬ್ಬ ವ್ಯಕ್ತಿಯು ಕೆಟಲ್‌ ಬೆಲ್ ಅನ್ನು ಹಿಡಿಯುವಾಗ ನೆಲದ ಮೇಲೆ ಮಲಗಿರಬೇಕು.

ವಿಡಿಯೋ ವೀಕ್ಷಿಸಿ:



Leave a Reply

error: Content is protected !!