Please assign a menu to the primary menu location under menu

National

2019ರಲ್ಲಿ ದಾಳಿಯಾಗಿದ್ದ ಪುಲ್ವಾಮಾ ಸಿಆರ್ ಪಿಎಫ್ ಕ್ಯಾಂಪಸ್ ನಲ್ಲಿ ರಾತ್ರಿ ಕಳೆದ ಅಮಿತ್ ಶಾ

ಶ್ರೀನಗರ: ಸಂವಿಧಾನದ 370ನೇ ವಿಧಿ ರದ್ದಾದ ಬಳಿಕ ಇದೇ ಮೊದಲ ಬಾರಿಗೆ ಜಮ್ಮು -ಕಾಶ್ಮೀರಕ್ಕೆ ಭೇಟಿ ನೀಡಿರುವ ಗೃಹ ಸಚಿವ ಅಮಿತ್ ಶಾ ದಿಢೀರ್‌ ಬೆಳವಣಿಗೆಯಲ್ಲಿ, ಅಮಿತ್‌ ಶಾ ತಮ್ಮ 3 ದಿನಗಳ ಭೇಟಿಯನ್ನು ಇನ್ನೂ 1 ದಿನ ವಿಸ್ತರಿಸಿದ್ದಲ್ಲದೆ, ಸೋಮವಾರ ರಾತ್ರಿಯನ್ನು ಪುಲ್ವಾಮಾದ ಸಿಆರ್‌ಪಿಎಫ್ ಕ್ಯಾಂಪ್‌ನಲ್ಲಿ ಕಳೆಯಲು ನಿರ್ಧರಿಸಿದರು.
2019 ರ ಫೆಬ್ರವರಿಯಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ನಡೆಸಿದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ 40 ಅರೆಸೈನಿಕ ಸಿಬ್ಬಂದಿಯನ್ನು ಬಲಿ ತೆಗೆದುಕೊಂಡಿದ್ದ ಪುಲ್ವಾಮಾದ ಲೆಥ್ಪೋರಾದ ಸಿಆರ್ ಪಿಎಫ್ ಕ್ಯಾಂಪಸ್ ನಲ್ಲಿ ರಾತ್ರಿ ತಂಗಿದ್ದರು. ಯೋಧರೊಂದಿಗೆ ಆಹಾರ ಸೇವಿಸಿ, ಅಲ್ಲೇ ರಾತ್ರಿ ಕಳೆದರು.
“ನಾನು ನಿಮ್ಮೊಂದಿಗೆ ಒಂದು ರಾತ್ರಿ ಕಳೆಯಲು ಮತ್ತು ನಿಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಬಯಸುತ್ತೇನೆ” ಎಂದು ಸಿಆರ್‌ಪಿಎಫ್ ಕ್ಯಾಂಪಸ್‌ನಲ್ಲಿ ಭದ್ರತಾ ಸಿಬ್ಬಂದಿಯನ್ನು ಉದ್ದೇಶಿಸಿ ಅಮಿತ್ ಶಾ ಹೇಳಿದರು. 2019ರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 42 ಯೋಧರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದರು.
ಇದನ್ನೂ ಓದಿ:ಚುನಾವಣೆಯಲ್ಲಿ ಸಚಿವರಿಗೆ ಎರಡು ಜಿ.ಪಂ. ಉಸ್ತುವಾರಿ ಸಮರ್ಥ ನಿಭಾವಣೆ: ಶಶಿಕಲಾ ಜೊಲ್ಲೆ
“ಕಲ್ಲು ತೂರಾಟದ ಘಟನೆಗಳು ನಾವು ಹುಡುಕಲು ಪ್ರಯತ್ನಿಸಿದಾಗ ಮಾತ್ರ ನೋಡುತ್ತೇವೆ. ಕಾಶ್ಮೀರದಲ್ಲಿ ಕಲ್ಲು ತೂರಾಟ ಸಾಮಾನ್ಯವಾಗಿದ್ದ ಕಾಲವಿತ್ತು. ಅಂತಹ ಘಟನೆಗಳು ಈಗ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ” ಎಂದು ಶಾ ಹೇಳಿದರು.

Addressing ‘Sainik Sammelan’ at the CRPF Campus, Lethpora in Pulwama district (J&K). https://t.co/8xYFrw15aS
— Amit Shah (@AmitShah) October 25, 2021

ಶ್ರೀನಗರ: ಸಂವಿಧಾನದ 370ನೇ ವಿಧಿ ರದ್ದಾದ ಬಳಿಕ ಇದೇ ಮೊದಲ ಬಾರಿಗೆ ಜಮ್ಮು -ಕಾಶ್ಮೀರಕ್ಕೆ ಭೇಟಿ ನೀಡಿರುವ ಗೃಹ ಸಚಿವ ಅಮಿತ್ ಶಾ ದಿಢೀರ್‌ ಬೆಳವಣಿಗೆಯಲ್ಲಿ, ಅಮಿತ್‌ ಶಾ ತಮ್ಮ 3 ದಿನಗಳ ಭೇಟಿಯನ್ನು ಇನ್ನೂ 1 ದಿನ ವಿಸ್ತರಿಸಿದ್ದಲ್ಲದೆ, ಸೋಮವಾರ ರಾತ್ರಿಯನ್ನು ಪುಲ್ವಾಮಾದ ಸಿಆರ್‌ಪಿಎಫ್ ಕ್ಯಾಂಪ್‌ನಲ್ಲಿ ಕಳೆಯಲು ನಿರ್ಧರಿಸಿದರು.

2019 ರ ಫೆಬ್ರವರಿಯಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ನಡೆಸಿದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ 40 ಅರೆಸೈನಿಕ ಸಿಬ್ಬಂದಿಯನ್ನು ಬಲಿ ತೆಗೆದುಕೊಂಡಿದ್ದ ಪುಲ್ವಾಮಾದ ಲೆಥ್ಪೋರಾದ ಸಿಆರ್ ಪಿಎಫ್ ಕ್ಯಾಂಪಸ್ ನಲ್ಲಿ ರಾತ್ರಿ ತಂಗಿದ್ದರು. ಯೋಧರೊಂದಿಗೆ ಆಹಾರ ಸೇವಿಸಿ, ಅಲ್ಲೇ ರಾತ್ರಿ ಕಳೆದರು.

“ನಾನು ನಿಮ್ಮೊಂದಿಗೆ ಒಂದು ರಾತ್ರಿ ಕಳೆಯಲು ಮತ್ತು ನಿಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಬಯಸುತ್ತೇನೆ” ಎಂದು ಸಿಆರ್‌ಪಿಎಫ್ ಕ್ಯಾಂಪಸ್‌ನಲ್ಲಿ ಭದ್ರತಾ ಸಿಬ್ಬಂದಿಯನ್ನು ಉದ್ದೇಶಿಸಿ ಅಮಿತ್ ಶಾ ಹೇಳಿದರು. 2019ರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 42 ಯೋಧರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದರು.

“ಕಲ್ಲು ತೂರಾಟದ ಘಟನೆಗಳು ನಾವು ಹುಡುಕಲು ಪ್ರಯತ್ನಿಸಿದಾಗ ಮಾತ್ರ ನೋಡುತ್ತೇವೆ. ಕಾಶ್ಮೀರದಲ್ಲಿ ಕಲ್ಲು ತೂರಾಟ ಸಾಮಾನ್ಯವಾಗಿದ್ದ ಕಾಲವಿತ್ತು. ಅಂತಹ ಘಟನೆಗಳು ಈಗ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ” ಎಂದು ಶಾ ಹೇಳಿದರು.

Leave a Reply

error: Content is protected !!