Please assign a menu to the primary menu location under menu

international

BREAKING: ಕ್ಷಿಪ್ರ ಕ್ರಾಂತಿಯಲ್ಲಿ ಸುಡಾನ್​ ಪ್ರಧಾನಿ ಸೇರಿದಂತೆ ಹಿರಿಯ ಅಧಿಕಾರಿಗಳ ಅರೆಸ್ಟ್; ಇಂಟರ್ನೆಟ್​ ಸೇವೆ ಸ್ಥಗಿತ

BREAKING: ಕ್ಷಿಪ್ರ ಕ್ರಾಂತಿಯಲ್ಲಿ ಸುಡಾನ್​ ಪ್ರಧಾನಿ ಸೇರಿದಂತೆ ಹಿರಿಯ ಅಧಿಕಾರಿಗಳ ಅರೆಸ್ಟ್; ಇಂಟರ್ನೆಟ್​ ಸೇವೆ ಸ್ಥಗಿತ

ಸುಡಾನ್​ನ ಹಂಗಾಮಿ ಪ್ರಧಾನಿ ಹಾಗೂ ಹಲವಾರು ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ಸಚಿವಾಲಯ ಹೇಳಿದೆ.‌ ಕ್ಷಿಪ್ರಕ್ರಾಂತಿಗೆ ಬೆಂಬಲ ಸೂಚಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. Read more…

ಸುಡಾನ್​ನ ಹಂಗಾಮಿ ಪ್ರಧಾನಿ ಹಾಗೂ ಹಲವಾರು ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ಸಚಿವಾಲಯ ಹೇಳಿದೆ.‌

ಕ್ಷಿಪ್ರಕ್ರಾಂತಿಗೆ ಬೆಂಬಲ ಸೂಚಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಸಚಿವಾಲಯದ ಫೇಸ್​ಬುಕ್​​ ನೀಡಿರುವ ಮಾಹಿತಿಯ ಪ್ರಕಾರ, ದೇಶದಲ್ಲಿ ಇಂಟರ್ನೆಟ್​ ಹಾಗೂ ದೂರವಾಣಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಸುಡಾನ್​ ಪ್ರಧಾನಿ ಅಬ್ದಲ್ಲಾ ಹಮ್​ಡೋಕ್​ ಪ್ರಸ್ತುತ ಎಲ್ಲಿದ್ದಾರೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ನಡುವೆ ದೇಶದ ನ್ಯೂಸ್​ ಚಾನೆಲ್​ ದೇಶಭಕ್ತಿಯ ಸಾಂಪ್ರದಾಯಿಕ ಸಂಗೀತ ಹಾಗೂ ನೈಲ್​​ ನದಿಯ ಸೀನ್​ಗಳನ್ನು ಪ್ರಸಾರ ಮಾಡಿದೆ.

ದೇಶದ ಪ್ರಮುಖ ಪ್ರಜಾಪ್ರಭುತ್ವ ಗುಂಪು ಹಾಗೂ ಅತಿದೊಡ್ಡ ರಾಜಕೀಯ ಪಕ್ಷವು ಸ್ಪಷ್ಟವಾದ ಸೇನಾ ದಂಗೆಯನ್ನು ಎದುರಿಸಲು ಜನರಿಗೆ ಬೀದಿಗಿಳಿಯುವಂತೆ ಕರೆ ನೀಡಿದೆ. ಸಾವಿರಾರು ಜನರು ಖಾರ್ಟೂಮ್​ ಹಾಗೂ ಓಮ್ದುರ್ಮಾನ್​​ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಜನರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಬಳಕೆ ಮಾಡಿದ್ದಾರೆ ಹಾಗೂ ಇದರಿಂದ ಕೋಪಗೊಂಡ ಪ್ರತಿಭಟನಾಕಾರು ಬೀದಿಗಳಲ್ಲಿ ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಈ ಎಲ್ಲಾ ದೃಶ್ಯಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.


Leave a Reply

error: Content is protected !!