Please assign a menu to the primary menu location under menu

international

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆಡಮಾಸ್ಕಸ್: ಅಮೆರಿಕ ನಡೆಸಿದ ಏರ್ ಸ್ಟ್ರೈಕ್ ನಲ್ಲಿ ಅಲ್ ಖೈದಾ ಉಗ್ರ ಸಂಘಟನೆಯ ಹಿರಿಯ ನಾಯಕನನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ವಾಯುವ್ಯ ಸಿರಿಯಾದಲ್ಲಿ ಶುಕ್ರವಾರ ಈ ವೈಮಾನಿಕ ದಾಳಿ ನಡೆದಿದೆ.
ಈ ದಾಳಿಯಲ್ಲಿ ಯಾವುದೇ ನಾಗರಿಕ ಸಾವು ನೋವುಗಳಾಗಿಲ್ಲ ಎಂದು ಅಮೆರಿಕ ಮಿಲಿಟರಿ ಮಾಹಿತಿ ನೀಡಿದೆ.
ಸೆಂಟ್ರಲ್ ಕಮಾಂಡ್ ವಕ್ತಾರ ಮೇಜರ್ ಜಾನ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಸಾವನ್ನಪ್ಪಿದ ಅಲ್ ಖೈದಾ ನಾಯಕನನ್ನು ಅಬ್ದುಲ್ ಹಮೀದ್ ಅಲ್ ಮತಾರ್ನ್ ಎಂದು ಗುರುತಿಸಲಾಗಿದೆ. MQ-9 ವಿಮಾನವನ್ನು ಬಳಸಿ ನಡೆಸಿದ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:11 ಮಂದಿ ಚಾರಣಿಗರು ಸಾವು! 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ
ಅಲ್-ಖೈದಾವು ಪುನರ್ನಿರ್ಮಾಣ ಮಾಡಲು, ಬಾಹ್ಯ ಅಂಗಸಂಸ್ಥೆಗಳೊಂದಿಗೆ ಕಾರ್ಯಾಚರಣೆಗಳನ್ನು ಯೋಜಿಸಲು ಸುರಕ್ಷಿತ ತಾಣವಾಗಿ ಸಿರಿಯಾವನ್ನು ಬಳಸುತ್ತದೆ. ಸಿರಿಯಾ, ಇರಾಕ್ ನಲ್ಲಿ ಅಲ್-ಖೈದಾ ಪ್ರಾಬಲ್ಯಕ್ಕೆ ಯತ್ನಿಸಿದ್ದು, ಅಮೆರಿಕದ ನಾಗರಿಕರು, ಪಾಲುದಾರರು ಮತ್ತು ಮುಗ್ಧ ನಾಗರಿಕರನ್ನು ಬೆದರಿಸುವ ಜಾಗತಿಕ ದಾಳಿಗಳನ್ನು ನಡೆಸಲು ಭಯೋತ್ಪಾದಕ ಸಂಘಟನೆ ಮುಂದಾಗಿದೆ.

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ

ಡಮಾಸ್ಕಸ್: ಅಮೆರಿಕ ನಡೆಸಿದ ಏರ್ ಸ್ಟ್ರೈಕ್ ನಲ್ಲಿ ಅಲ್ ಖೈದಾ ಉಗ್ರ ಸಂಘಟನೆಯ ಹಿರಿಯ ನಾಯಕನನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ವಾಯುವ್ಯ ಸಿರಿಯಾದಲ್ಲಿ ಶುಕ್ರವಾರ ಈ ವೈಮಾನಿಕ ದಾಳಿ ನಡೆದಿದೆ.

ಈ ದಾಳಿಯಲ್ಲಿ ಯಾವುದೇ ನಾಗರಿಕ ಸಾವು ನೋವುಗಳಾಗಿಲ್ಲ ಎಂದು ಅಮೆರಿಕ ಮಿಲಿಟರಿ ಮಾಹಿತಿ ನೀಡಿದೆ.

ಸೆಂಟ್ರಲ್ ಕಮಾಂಡ್ ವಕ್ತಾರ ಮೇಜರ್ ಜಾನ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಸಾವನ್ನಪ್ಪಿದ ಅಲ್ ಖೈದಾ ನಾಯಕನನ್ನು ಅಬ್ದುಲ್ ಹಮೀದ್ ಅಲ್ ಮತಾರ್ನ್ ಎಂದು ಗುರುತಿಸಲಾಗಿದೆ. MQ-9 ವಿಮಾನವನ್ನು ಬಳಸಿ ನಡೆಸಿದ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ಅಲ್-ಖೈದಾವು ಪುನರ್ನಿರ್ಮಾಣ ಮಾಡಲು, ಬಾಹ್ಯ ಅಂಗಸಂಸ್ಥೆಗಳೊಂದಿಗೆ ಕಾರ್ಯಾಚರಣೆಗಳನ್ನು ಯೋಜಿಸಲು ಸುರಕ್ಷಿತ ತಾಣವಾಗಿ ಸಿರಿಯಾವನ್ನು ಬಳಸುತ್ತದೆ. ಸಿರಿಯಾ, ಇರಾಕ್ ನಲ್ಲಿ ಅಲ್-ಖೈದಾ ಪ್ರಾಬಲ್ಯಕ್ಕೆ ಯತ್ನಿಸಿದ್ದು, ಅಮೆರಿಕದ ನಾಗರಿಕರು, ಪಾಲುದಾರರು ಮತ್ತು ಮುಗ್ಧ ನಾಗರಿಕರನ್ನು ಬೆದರಿಸುವ ಜಾಗತಿಕ ದಾಳಿಗಳನ್ನು ನಡೆಸಲು ಭಯೋತ್ಪಾದಕ ಸಂಘಟನೆ ಮುಂದಾಗಿದೆ.

Leave a Reply

error: Content is protected !!