Please assign a menu to the primary menu location under menu

State

ಸಚಿವರಿಗೆ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಜವಾಬ್ದಾರಿ ಹಂಚಿಕೆ

ಸಚಿವರಿಗೆ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ಜವಾಬ್ದಾರಿ ಹಂಚಿಕೆ

ಬೆಂಗಳೂರು: ನ.1ರಂದು ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣಕ್ಕೆ ಸಚಿವರಿಗೆ ಉಸ್ತುವಾರಿ ವಹಿಸಿ ಸರ್ಕಾರ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಗಾವಿ-ಗೋವಿಂದ ಕಾರಜೋಳ, ಶಿವಮೊಗ್ಗ-ಕೆ.ಎಸ್‌.ಈಶ್ವರಪ್ಪ, ಬಿ.ಶ್ರೀರಾಮುಲು-ಚಿತ್ರದುರ್ಗ, ಉಮೇಶ ಕತ್ತಿ-ಬಾಗಲಕೋಟೆ, ಎಸ್‌.ಅಂಗಾರ-ದಕ್ಷಿಣ ಕನ್ನಡ, ಜೆ.ಸಿ. ಮಾಧುಸ್ವಾಮಿ -ತುಮಕೂರು, ಆರಗ ಜ್ಞಾನೇಂದ್ರ-ಚಿಕ್ಕಮಗಳೂರು, ಡಾ.ಸಿ.ಎನ್‌.ಅಶ್ವತ್ಥ ನಾರಾಯಣ-ರಾಮನಗರ, ಸಿ.ಸಿ.ಪಾಟೀಲ್‌-ಗದಗ, ಆನಂದ ಸಿಂಗ್‌- ವಿಜಯನಗರ, ಕೋಟ ಶ್ರೀನಿವಾಸ ಪೂಜಾರಿ-ಕೊಡಗು, ಪ್ರಭು ಚೌವ್ಹಾಣ್‌-ಬೀದರ್‌, ಮುರುಗೇಶ ನಿರಾಣಿ-ಕಲಬುರಗಿ, ಅರಬೈಲ್‌ ಶಿವರಾಮ ಹೆಬ್ಟಾರ್‌-ಉತ್ತರ ಕನ್ನಡ.

ಎಸ್‌.ಟಿ.ಸೋಮಶೇಖರ್‌-ಮೈಸೂರು, ಬಿ.ಸಿ. ಪಾಟೀಲ್‌-ಹಾವೇರಿ, ಬೈರತಿ ಬಸವರಾಜ-ದಾವಣಗೆರೆ, ಡಾ.ಕೆ.ಸುಧಾಕರ-ಚಿಕ್ಕಬಳ್ಳಾಪುರ, ಕೆ.ಗೋಪಾಲಯ್ಯ-ಹಾಸನ, ಶಶಿಕಲಾ ಜೊಲ್ಲೆ-ವಿಜಯಪುರ, ಎಂ.ಟಿ.ಬಿ. ನಾಗರಾಜ-ಬೆಂಗಳೂರು ಗ್ರಾಮಾಂತರ, ಡಾ.ಕೆ.ಸಿ. ನಾರಾಯಣಗೌಡ-ಮಂಡ್ಯ.

ವಿ.ಸುನಿಲ್‌ಕುಮಾರ್‌-ಉಡುಪಿ, ಹಾಲಪ್ಪ ಆಚಾರ್‌-ಕೊಪ್ಪಳ, ಶಂಕರ ಪಾಟೀಲ್‌ ಮುನೇನಕೊಪ್ಪ-ಧಾರವಾಡ, ಮುನಿರತ್ನ-ಕೋಲಾರ ಜಿಲ್ಲೆಗಳಲ್ಲಿ ಧ್ವಜಾರೋಹಣ ನೆರವೇರಿಸಲು ಆದೇಶಿಸಲಾಗಿದೆ.

ಚಾಮರಾಜನಗರ, ರಾಯಚೂರು, ಯಾದಗಿರಿ, ಬಳ್ಳಾರಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಧ್ವಜಾರೋಹಣ ನೆರವೇರಿಸಲು ಆದೇಶಿಸಲಾಗಿದೆ. ಹಿರಿಯ ಸಚಿವರಾದ ಆರ್‌. ಅಶೋಕ್‌, ವಿ.ಸೋಮಣ್ಣ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರಿಗೆ ಧ್ವಜಾರೋಹಣಕ್ಕೆ ಯಾವುದೇ ಜಿಲ್ಲೆಯ ಜವಾಬ್ದಾರಿ ವಹಿಸಿಲ್ಲ.


Leave a Reply

error: Content is protected !!